Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

"ಸಾರಿಗೆ ಭವನ" ಕೇಂದ್ರ ಕಛೇರಿ,

ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-560 027. ಭಾರತ

ದೂರವಾಣಿ : 080-22221321 / 22221325

ವೆಬ್-ಸೈಟ್ : www.ksrtc.in

Karnataka State Road Transport Corporation logo

Karnataka State Road Transport Corporation logo

Karnataka State Road Transport Corporation

"Transport House" Central Offices,
K.H.Road, Shanthinagar, Bangalore-560 027. India

Tel : 080-22221321 / 25

Website : www.ksrtc.in

ಕರಾಸ:ಕೇಕ:ಆಡಳಿತ:ಸೇನಿ:518:44:16-17

ದಿನಾಂಕ: 16-05-2016

ಸುತ್ತೋಲೆ ಸಂಖ್ಯೆ: 1588

ವಿಷಯ: ವಿಧಾನ ಸಭೆ/ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಆಡಳಿತಾತ್ಮಕ
ವಿಷಯದಲ್ಲಿ ಸಭೆ ನಡೆಸಲು ಅಧಿಕಾರ ಹೊಂದಿರುವ ಬಗ್ಗೆ.

ಉಲ್ಲೇಖ: 1) ಸಂ: ಸಿಆಸುಇ 272 ಸೆಅಸೆ 2009 ದಿನಾಂಕ 25-6-2009
2) ಸಂ: ಸಿಆಸುಇ 9 ರಾರಾಆ 2016 ದಿನಾಂಕ: 27-04-2016

ಉಲ್ಲೇಖ-1ರಲ್ಲಿ ಕರ್ನಾಟಕ ಸರ್ಕಾರವು ವಿಧಾನ ಸಭೆ/ವಿಧಾನ ಪರಿಷತ್ತಿನ ವಿರೋಧ ಪಕ್ಷದ
ನಾಯಕರಿಗೆ ಆಡಳಿತಾತ್ಮಕ ವಿಷಯಗಳಲ್ಲಿ ಇರುವ ಅಧಿಕಾರದ ಬಗ್ಗೆ ವಿವರಿಸಿ "ವಿರೋಧ ಪಕ್ಷದ
ನಾಯಕರಿಗೆ ಸಂಪುಟ ದರ್ಜೆಯ ಸಚಿವರ ವೇತನ, ಭತ್ಯೆ, ಮತ್ತಿತರ ಸೌಲಭ್ಯಗಳನ್ನು
ನೀಡಲಾಗಿದೆಯೇ ಹೊರತು ಅವರು ಸರ್ಕಾರದ ಭಾಗವಾಗಿಲ್ಲದಿರುವುದರಿಂದ ಅವರಿಗೆ ಸಚಿವರಿಗಿರುವ
ಆಡಳಿತಾತ್ಮಕ ಅಧಿಕಾರವನ್ನು ನೀಡಲಾಗಿಲ್ಲ. ಆದ್ದರಿಂದ, ಸದರಿಯವರು ಸಚಿವ ಸಂಪುಟ ಸಚಿವರಿಗೆ
ನೀಡತಕ್ಕ ಶಿಷ್ಟಾಚಾರಕ್ಕೆ ಅರ್ಹರಾಗಿರುತ್ತಾರೆ ಮತ್ತು ಸರ್ಕಾರಕ್ಕೆ ಸಂಬಂಧಪಟ್ಟಂತೆ ಬೇಕಾದ ಅಗತ್ಯ
ಮಾಹಿತಿಯನ್ನು ಅವರು ಸದನದ ಮೂಲಕವಾಗಲಿ, ಸಭಾಧ್ಯಕ್ಷ/ಸಭಾಪತಿಗಳ/ಸಚಿವರ
ಮೂಲಕವಾಗಲಿ ಅಥವಾ ಪತ್ರದ ಮೂಲಕ ಬರೆದು ಪಡೆಯಬಹುದಾಗಿದೆ. ವಿಧಾನ ಸಭೆ ಅಥವಾ
ವಿಧಾನ ಪರಿಷತ್ತಿನ ಸದಸ್ಯರಿಗೆ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆಯಲು ಯಾವ ಅಧಿಕಾರ
ಇದೆಯೋ ಆ ಅಧಿಕಾರ ವಿರೋಧ ಪಕ್ಷದ ನಾಯಕರಿಗೆ ಇದೆ.

ಆದರೆ, ಅಧಿಕಾರಿಗಳ ಸಭೆ ಕರೆಯಲು ಸಚಿವರಿಗೆ ಇರುವ ಅಧಿಕಾರ ವಿರೋಧ ಪಕ್ಷದ
ನಾಯಕರಿಗೆ ಇರುವುದಿಲ್ಲ. ಇದು ಯಾವುದೇ ರೀತಿಯಲ್ಲಿ ವಿರೋಧ ಪಕ್ಷದ ನಾಯಕರ ಘನತೆಗೆ
ಕುಂದುತರುವ ಅಥವಾ ಅಗೌರವ ಸೂಚಕವೆಂದು ಪರಿಗಣಿಸಲಾಗದು. ಈ ಅಂಶವನ್ನು
ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಸರ್ಕಾರಿ ಅಧಿಕಾರಿಗಳು ಗಮನದಲ್ಲಿಡಬೇಕು”.

ಮೇಲೆ ತಿಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರ ಸಂಬಂಧದಲ್ಲಿ ಅಗತ್ಯ
ಶಿಷ್ಟಾಚಾರವನ್ನು ಪಾಲಿಸುವುದಲ್ಲದೆ ಮೇಲೆ ತಿಳಿಸಿರುವಂತೆ ವಿರೋಧ ಪಕ್ಷದ ನಾಯಕರಿಗೆ ಅಗತ್ಯ
ಮಾಹಿತಿಯನ್ನು ಸೂಕ್ತವಾಗಿ ಒದಗಿಸಬಹುದಾಗಿದೆ ಎಂದು ನಿರ್ದೇಶನವಿರುತ್ತದೆ.

ಸರ್ಕಾರದ ಸುತ್ತೋಲೆಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದ್ದು, ಸದರಿ ಸುತ್ತೋಲೆಯಲ್ಲಿ
ಸ್ಪಷ್ಟಪಡಿಸಲಾಗಿರುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು.

ಅಡಕ: ಮೇಲಿನಂತೆ.

Signature of R. Kataria

(ರಾಜೇಂದರ್‌ ಕುಮಾರ ಕಟಾರಿಯಾ)

ವ್ಯವಸ್ಥಾಪಕ ನಿರ್ದೇಶಕರು

.. 2