Benchmarks
View scores and output across OCR models spanning many document categories.
Want to run these evals on your own documents?
Talk to Salesಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ನಮ್ಮೂರ ಶಾಲೆಗೆ ನಮ್ಮ ಯುವಜನರು ಕಾರ್ಯಕ್ರಮದ ಮಾರ್ಗಸೂಚಿಯನ್ನು ಪರಿಷ್ಕರಿಸುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಯುಸೇಇ 53 ಯುಸೇಕ್ರೀ 2013.
ದಿನಾಂಕ: 26.11.2013
2. ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಪತ್ರ
ಸಂಖ್ಯೆ: ಯುಸಕ್ರೀಇ/ಯುನಿ/ನಶಾನಯು/01/2017-18, ದಿನಾಂಕ: 06.04.2017.
********
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರದ ಆದೇಶದನ್ವಯ ಈಗಾಗಲೇ ರಾಜ್ಯದಲ್ಲಿ ಯುವ ನೀತಿ ಅನುಷ್ಠಾನ
ಅಡಿಯಲ್ಲಿ “ನಮ್ಮೂರ ಶಾಲೆಗೆ ನಮ್ಮ ಯುವಜನರು” ಕಾರ್ಯಕ್ರಮವನ್ನು 2013ನೇ ಸಾಲಿನಿಂದ
ಅನುಷ್ಠಾನಗೊಳಿಸಲಾಗುತ್ತಿದೆ. ಮೇಲೆ ಓದಲಾದ (2)ರ ದಿನಾಂಕ: 01.04.2017ರ ಪತ್ರದಲ್ಲಿ ನಿರ್ದೇಶಕರು, ಯುವ
ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರು ನೊಂದಾವಣೆಗೊಂಡಿರುವ ಸಂಸ್ಥೆಗಳ
ಕಾರ್ಯವ್ಯಾಪ್ತಿಯಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಭೌತಿಕ ಹಾಗೂ ಭೌದ್ಧಿಕ
ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಅರ್ಹ
ಸಂಸ್ಥೆಗಳಿಗೆ ತಾಲ್ಲೂಕಿಗೆ ಒಂದರಂತೆ ಒಂದು ಯುವಕ/ಯುವತಿ ಸಂಘಕ್ಕೆ ರೂ.1.00 ಲಕ್ಷದಂತೆ ಸರ್ಕಾರದಿಂದ
ಪ್ರೋತ್ಸಾಹಧನ ನೀಡಲಾಗುತ್ತಿದೆ. 2017-18ನೇ ಸಾಲಿನಿಂದ ಯುವ ಚೈತನ್ಯ ಕಾರ್ಯಕ್ರಮವನ್ನು
ಅನುಷ್ಠಾನಗೊಳಿಸಲಾಗುತ್ತಿರುವುದರಿಂದ “ನಮ್ಮೂರ ಶಾಲೆಗೆ ನಮ್ಮ ಯುವಜನರು” ಕಾರ್ಯಕ್ರಮದ
ಮಾರ್ಗಸೂಚಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
Copy R.V.N.
Sm 23/5/12
P 10:40 am
ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಯುಸೇಇ 123 ಯುಸೇಕ್ರೀ 2017
ಬೆಂಗಳೂರು, ದಿನಾಂಕ: 15.05.2017
Sub
2415
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, “ನಮ್ಮೂರ ಶಾಲೆಗೆ ನಮ್ಮ ಯುವಜನರು” ಕಾರ್ಯಕ್ರಮದ ಮಾರ್ಗಸೂಚಿಯನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದೆ.
1) ಫಲಾನುಭವಿ:
ಅ) ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ
ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ, ರಾಜ್ಯ
ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳನ್ನು
ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಪ್ರೋತ್ಸಾಹಧನವಾಗಿ
ರೂ.1.00 ಲಕ್ಷಗಳ ಅನುದಾನ ನೀಡುವುದು.
ಆ) ಈ ಪೈಕಿ ರೂ.10,000/-ಗಳನ್ನು ಸದರಿ ಶಾಲೆಯ ದೈಹಿಕ ಶಿಕ್ಷಕರಿಗೆ ಪ್ರೋತ್ಸಾಹಧನವಾಗಿ ಹಾಗೂ
ರೂ.90,000/-ಗಳನ್ನು ಶಾಲೆಯ ಎಸ್.ಡಿ.ಎಂ.ಸಿ.ಗೆ ಅಗತ್ಯ ಕ್ರೀಡಾ ಸಾಮಾಗ್ರಿ ಪೂರೈಕೆಗಾಗಿ 17.5.2017 ಅನುದಾನ ರೂಪದಲ್ಲಿ ನೀಡುವುದು.
| Officer/Section | ದೀ YP |
| Director |
-2