Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1
Seal of the Kannada University Hampi
Seal of the Kannada University Hampi

ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ-೫೮೩೨೭೬

ಡಾ. ಸಣ್ಣರಾಮ,

ನಿರ್ದೇಶಕರು.

ದಿನಾಂಕ: ೦೯.೦೪.೨೦೨೨

ಪ್ರಸ್ತಾವನೆ

ವಿಷಯ: ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಲಂಬಾಣಿ ಬುಡಕಟ್ಟು ಸಮುದಾಯದ ಸಂತರು, ಇತಿಹಾಸ ಪುರುಷರು, ಸಾಂಸ್ಕೃತಿಕ ನಾಯಕರು, ಸಮಾಜ ಸುಧಾರಕರು ಹಾಗೂ ಸಾಧಕರ ಸೇವೆ ಸಲ್ಲಿಸಿದವರ ಬದುಕನ್ನು ಕುರಿತು ಸಂಶೋಧನಾತ್ಮಕ ಐದು ಪ್ರಬಂಧಗಳ ರಚನೆಯ ಯೋಜನೆಯನ್ನು ರೂಪಿಸಲಾಗಿದೆ.

ಉಲ್ಲೇಖ: ಮಾನ್ಯ ಕುಲಪತಿಗಳ ಆಡಳಿತಾತ್ಮಕ ಅನುಮೋದನೆ ಕಂಡಿಕೆ-೪ ಮತ್ತು ದಿನಾಂಕ: ೦೯.೦೪.೨೦೨೨.

ಶೈಕ್ಷಣಿಕ ಅರ್ಹತೆ ಮತ್ತು ನಿಯಮಾವಳಿಗಳು

  1. ಅಧ್ಯಯನಕಾರರು ಅಂಗೀಕೃತ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಎಚ್.ಡಿ. (ಕನ್ನಡ, ಆಂಗ್ಲ, ಹಿಂದಿ, ಇತಿಹಾಸ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಪುರಾತತ್ವ ವಿಷಯ)ಗಳಲ್ಲಿ ಪದವಿ ಪಡೆದಿರಬೇಕು.
  2. ಬಂಜಾರ ಸಮುದಾಯವನ್ನು ಕನ್ನಡ, ಬಂಜಾರ ಮತ್ತು ಆಂಗ್ಲ ಭಾಷೆಗಳಲ್ಲಿ ಅಧ್ಯಯನ ಅಥವಾ ಸಂಶೋಧನೆ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
  3. ಯೋಜನೆಯ ಮೊದಲ ಹಂತದಲ್ಲಿ ಐದು ಸಂಶೋಧನ ಬರಹಗಾರರಿಗೆ ಮಾತ್ರ ಅವಕಾಶವಿದೆ.
  4. ಯೋಜನೆಯ ಆಸಕ್ತ ಅಭ್ಯರ್ಥಿಗಳು ತಮ್ಮ ವಿಷಯಕ್ಕೆ ಸಂಬಂಧಿಸಿದ ಸಾರಲೇಖವನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ನಿರ್ದೇಶಕರು, ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ ವಿಜಯನಗರ ಜಿಲ್ಲೆ-೫೮೩೨೭೬. ಇವರಿಗೆ ದಿನಾಂಕ: ೧೦.೦೫.೨೦೨೨ರೊಳಗೆ ಸಲ್ಲಿಸಬೇಕು.
  5. ಪ್ರಬಂಧದ ಸಾರಲೇಖನವನ್ನು ತಜ್ಞ ಸಮಿತಿಯು ಪರಿಶೀಲಿಸಿ ಆಯ್ಕೆಯಾದ ಪ್ರಬಂಧದ ಲೇಖಕರಿಗೆ ಸಂದರ್ಶನವಿರುತ್ತದೆ.
  6. ಯೋಜನೆಯ ಪ್ರಬಂಧವು ಕನಿಷ್ಠ ೧೦೦ ಪುಟ ಇರಬೇಕು ಹಾಗೂ ಡಿಟಿಪಿ ಮಾಡಿದ ಅಕ್ಷರ (ಪಾಂಟ್ಸ್ ಸೈಜ್) ೧೩ ಗಾತ್ರದಲ್ಲಿ ಇರಬೇಕು.
  7. ಯೋಜನೆಗೆ ಸಂಬಂಧಿಸಿದ ಸಾಧಕರನ್ನು ಕುರಿತ ಪ್ರಬಂಧಗಳು ಎಂ.ಫಿಲ್. ಪಿಎಚ್.ಡಿ. ಸಂಶೋಧನ ಮಹಾಪ್ರಬಂಧಗಳಲ್ಲಿ ಪ್ರಕಟವಾಗಿರಬಾರದು ಹಾಗೂ ಪ್ರಸ್ತುತ ಸಂಶೋಧನೆ ಮಾಡುತ್ತಿರಬಾರದು.
  8. ಆಯ್ಕೆಯಾದ ಪ್ರಬಂಧಕಾರರಿಗೆ ಪ್ರಬಂಧವನ್ನು ಸಿದ್ಧಪಡಿಸಿಕೊಡಲು ಆರು ತಿಂಗಳುಗಳ ಕಾಲಾವಕಾಶವಿರುತ್ತದೆ.
  9. ಈ ಯೋಜನೆಯ ಪ್ರತಿ ಪ್ರಬಂಧ ರಚನೆಗೆ ನಿಗದಿಪಡಿಸಿದ ಮೊತ್ತ ರೂ. ೧,೦೦,೦೦೦/- (ಒಂದು ಲಕ್ಷ) ರೂಪಾಯಿಗಳನ್ನು ಗೌರವ ಸಂಭಾವನೆಯಾಗಿ ನೀಡಲಾಗುವುದು. ಇತರೆ ಇನ್ಯಾವುದೇ ಭತ್ಯೆಯನ್ನು ನೀಡುವುದಿಲ್ಲ.
  10. ಪ್ರತಿ ಪ್ರಬಂಧದ ರಚನೆಗೆ ಮುಂಗಡವಾಗಿ ರೂ: ೨೫,೦೦೦/- (ಇಪ್ಪತ್ತೈದು ಸಾವಿರ ರೂಪಾಯಿ) ಗಳನ್ನು ನೀಡಲಾಗುವುದು.

Scanned with CamScanner