Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

International Journal of Kannada Research

ಕನ್ನಡ ಮಾತನಾಡುವ ಮಂದಿ ವಿವಿಧ ಭಾಷಿಕ ಕೇಂದ್ರಾಡಳಿತಕ್ಕೆ ಒಳಪಟ್ಟಾಗ ಪ್ರಭುತ್ವ ಭಾಷೆ ಮುಂಚೂಣಿಯಲ್ಲಿ ಕಾಣಿಸಿಕೊಂಡು ಜನಪದ ಭಾಷೆಗೆ ಅಸ್ಥಿತ್ವ ಹೀನವಾಗತೊಡಗಿತು. ಇಂತಹ ಒತ್ತಡ ಧಾರವಾಡ ಮತ್ತು ಬೆಳಗಾವಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬಂದಿತು. ಇಂತಹದೊಂದು ದುಸ್ಥಿತಿಯನ್ನು ಶಾಂತ ಕವಿಗಳು (ಸಕ್ಕರಿಬಾಳಚಾರ್ಯ) ಕವಿತೆಯ ಮೂಲಕ ಹಿಡಿದಿಡಲು ಪ್ರಯತ್ನಿಸಿದರೂ ಎಲ್ಲಿ ನೋಡಿದರು ಮರಾಠಿಯೇ ಕನ್ನಡ ಭಾಷಿಕ ನೆಲೆಗಳ ಮೇಲೆ ಮರಾಠಿಯು ಸಾಹಿತ್ಯಕವಾಗಿ ವ್ಯಾಪಕವಾಗಿ ಹರಡಿಕೊಂಡಿತು. ಇಂತಹ ಸಂದರ್ಭದಲ್ಲಿ ಮುದವೀಡು ವೆಂಕಟರಾವ್, ಆಲೂರು ವೆಂಕಟರಾವ್, ಜೋಶಿವೆಂಕಟರಾವ್, ಕೃಷ್ಣರಾವ್, ಮುದವೀಡು ರಾಮಚಂದ್ರರಾವ್, ಶೇಷಗಿರಿ ರಾಘವೇಂದ್ರರಾವ್, ಹೊನ್ನಾಪುರದ ಗದಿಗೆಯ್ಯ, ನರಗುಂದಕರ ರಾಜಪುರೋಹಿತ, ಅಟ್ಟಿಗೇರಿ ಪಾಟೀಲ ಸಂಗನಗೌಡ, ನವಲಗುಂದದ ಕುಲಕರ್ಣಿಕರ ವೀರಪುರುಷ ಇವರೆಲ್ಲಾ ಕರ್ನಾಟಕ ಏಕೀಕರಣಕ್ಕೆ ಹಗಲಿರುಳು ಶ್ರಮಿಸಿದರು. ಇವರ ಜೊತೆಗೆ ಸಾಮೂಹಿಕ ಸಂಘಗಳನ್ನು ಸ್ಥಾಪಿಸಿಕೊಂಡರು. ಅದರಲ್ಲಿ ಪ್ರಮುಖವಾದುವುಗಳಂದರೆ, ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಸಭಾ, ಕರ್ನಾಟಕ ಸಾಹಿತ್ಯ ಪರಿಷತ್‌, ಇವುಗಳು ಕರ್ನಾಟಕ ಏಕೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವು.

ಇದೇ ಸಂದರ್ಭದಲ್ಲಿ ಮಹಿಳೆಯರ ಪಾತ್ರವೇನು ಕಡಿಮೆ ಇರಲಿಲ್ಲ. ಆದರೆ ಇತಿಹಾಸ ಪುಟಗಳಲ್ಲಿ ಮಹಿಳೆಯ ಹೆಸರುಗಳು ಇಲ್ಲದೆನ್ನುವಷ್ಟು ಅಪರೂಪವಾಗಿದೆ. ಆದರೆ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮಹಿಳೆಯರನ್ನು ಅವರ ಜೀವನ ಚರಿತ್ರೆಗಳಿಂದ ತಿಳಿದು ಬರುತ್ತದೆಯೇ ವಿನಃ ಹೋರಾಟದ ಮುಖ್ಯವಾಹಿನಿ ಚರಿತ್ರೆಯಿಂದ ತೀರ ಕಡೆಗಣಿಸಲ್ಪಟ್ಟಿದೆ. ಅಂದಿನ ಕಾಲದಲ್ಲಿ ಮಹಿಳೆಗೆ ಸಂಪೂರ್ಣವಾಗಿ ಶಿಕ್ಷಣವನ್ನು ನಿರಾಕರಿಸಲಾಗಿದ್ದರೂ ಅಲ್ಲಲ್ಲಿ ಸ್ವಪ್ರತಿಭೆಯಿಂದ ಮೇಲೆ ಬಂದು ಇವರಂತಹದೊಂದು ರಾಜ್ಯ ಮತ್ತು ರಾಷ್ಟ್ರೀಯ

ಆಂದೋಲನಗಳಲ್ಲಿ ಇತಿಮಿತಿಗಳೊಂದಿಗೆ ತೊಡಗಿಸಿಕೊಂಡರು. ಬಳ್ಳಾರಿ ಸಿದ್ದಮ್ಮ, ಜಯದೇವಿ ತಾಯಿಲಿಗಾಡೆ, ಶಾಂತದೇವಿ ಮಾಳವಾಡ, ವಿಮಳಬಾಯಿ ಮೇಲ್ನೋಟೆ, ಮಲ್ಲವ್ವ ಬಳ್ಳಾರಿ, ಲಿಂಗಮ್ಮವ್ವ, ಸುಮಂಗಳಮ್ಮ ತೊಗರಿ ಸ್ವರಮಂಗಳಮ್ಮ, ಗೋರ್ಲೆ ರುದ್ರಮ್ಮ ಕಾಸರಗೋಡು, ಸರಸ್ವತಿಬಾಯಿ, ಸುಹಾಸಿನಿ ಬಂಡಾರಿ, ಕಮಲಾಶೆಟ್ಟಿ, ರಾದಾಕಾಮತ್ ಬೆಳಗಾವಿ, ಆಶಾತಾಯಿ, ಡಾ. ಮಂದಾಕಿನಿ ಪಟ್ಟಣ, ಸಾವಿತ್ರಿದೇವಿ ಹಳ್ಳಕೇರಿ, ಶಕುಂತಲಾ ಕುರ್ತುಕೋಟಿ, ವೀರಮ್ಮ ಪಾಟೀಲ, ಭಾಗೀರಥಿ ಪಾಟೀಲ, ಶಾಂದೇವಿಜತ್ತಿ, ಬಸಮ್ಮ ಉಪ್ಪಿನ, ಚಂಪಾತಾಯಿ ಜೋಗಲೆ, ನಾಗಮ್ಮ ವೀರನ ಗೌಡಪಾಟೀಲ. ಲೀಲಾವತಿ ಮಾಗಡಿ, ಗಂಗಮ್ಮ ಗುಡ್ಡೆಪ್ಪ ಹಳ್ಳಕೇರಿ, ಪ್ರಮೀಳಾ ತಾಯಿಕಾಮತ್, ಸರೋಜಿನಿಶಿಂತ್ರಿ, ಸರಸ್ಕೃತಿಗಳೂರ, ದೇವಕ್ಕ ರಮಾನಂದ ಚನಂಗಿ, ಸಂಗಮ್‌ಮ ಪದ್ಮಾವತಿ ದೇಸಾಯಿ, ಚಂದ್ರಾಬಾಯಿ ಚೆನ್ನಪ್ಪವಾಲು, ಚೆನ್ನಮ್ಮ ವೇದಮೂರ್ತಿ ಇಟಗಿ, ಗವ್ರವ್ವಸಾವಳಗಿ, ಶಾಂತಬಾಯಿ ವೆಂಕಟೇಶ ಮಟದ, ಪಾರ್ವತಿಬಾಯಿ ದೇಶಪಾಂಡೆ. ಅಬ್ಬಕ್ಕ ಬಳಿಗಾವೆ. ಲಕ್ಷ್ಮಿದೇವಿ ಪಾಟೀಲ, ಉಮಾದೇವಿ ಟೊಪಣ್ಣನವರ, ಉಮಾದೇವಿ ಕುಂದಾಪುರ, ಕಾಡಮ್ಮ, ಗದಿಗೆವ್ವಕುರುಹಟ್ಟಿ, ಕ್ರಿಷ್ಣಾಬಾಯಿ ಪಣಜೀಕರ, ಗರ್ವವ್ವವಾರದೆ, ಪಂಚವ್ವಬಾಯಿವಾರದೆ, ಬಸವ್ವಬಾಯಿವಾರದ, ಬಸವಲಿಂಗಮ್ಮ, ಬಾಳೆಕುಂದ್ರಿ, ಬಳ್ಳಾರಿ ಯಶೋಧಮ್ಮ. ಈ ಮಹಿಳೆಯರಲ್ಲಿ ಕೆಲವರು ಲೇಖಕಿ ಯಾರು? ಸಮಾಜ ಸೇವಾ ಕರ್ತರು, ರಾಜಕಾರಣಿಗಳು, ಹೋರಾಟಗಾರರ ಇದ್ದರು. ಅಂದಿನ ಮಹಿಳೆಯವರು ಒಂದಲ್ಲಾ ಒಂದು ರೀತಿಯಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡರು ರಾಷ್ಟ್ರವ್ಯಾಪಿಯಲ್ಲಿ ತಮ್ಮನ್ನು ಬಿಡುಗಡೆಗೊಳಿಸಿಕೊಳ್ಳಲು ಹೋರಾಡಿದಂತೆ, ಭಾಷಿಕವಾಗಿ ಒಂದಾಗಲು ಅವಿರತ ಶ್ರಮವಹಿಸಿದರು. ಈ ಮಹಿಳೆಯರಲ್ಲಿ ಸಾಹಿತ್ಯ ಮತ್ತು ಶೈಕ್ಷಣಿಕ ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡಿದ್ದ ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಬಳ್ಳಾರಿ ಸಿದ್ದಮ್ಮರವರನ್ನು ಪ್ರಧಾನವಾಗಿ ಗುರುಸಬಹುದು.

ತಾಯಿ ಜಯದೇವಿ ಲಿಗಾಡೆಯವರು ಮಹರಾಷ್ಟ್ರಕ್ಕೆ ಸೇರಿದ ಮಹಾರಾಷ್ಟ್ರಕ್ಕೆ ಸೇರಿರುವ ಸೊಲ್ಲಾಪುರದವರು. ಮನೆ ಮಾತು ಮರಾಠಿಯಾದದ್ದು ಕನ್ನಡ ಭಾಷಿಕರನ್ನು ಒಂದುಗೂಡಿಸಲು ಹಗಲಿರುಳು ಶ್ರಮವಹಿಸಿದರು. ಶ್ರೀಮಂತ ಮನೆತನದಲ್ಲಿ ಹುಟ್ಟಿ

~ 9 ~