Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ನಿಮ್ಮ ಭಾವಚಿತ್ರ, ಪ್ರವರ್ಗ, ಮೀಸಲಾತಿಗಳ ವಿವರ ಮತ್ತು ಪಾವತಿಸಬೇಕಾಗಿರುವ ನಿಗದಿತ ಶುಲ್ಕಗಳ ವಿವರಗಳು ಇರುತ್ತದೆ. ಆ ಚಲನ್ ಪ್ರತಿಯನ್ನು ಮುದ್ರಿಸಿ/ಪ್ರಿಂಟ್ ಮಾಡಿಕೊಳ್ಳತಕ್ಕದ್ದು.

  • ನಂತರ ಅರ್ಜಿದಾರ ಮುದ್ರಿಸಿಕೊಳ್ಳಲಾದ ಚಲನ್‌ನಲ್ಲಿ ನಮೂದಾಗಿರುವ ಒಟ್ಟು ಪರೀಕ್ಷಾ ಶುಲ್ಕವನ್ನು ನಗದು ರೂಪದಲ್ಲಿಯೇ ಅಧಿಕೃತ ಎಸ್.ಬಿ.ಎಂ ಅಥವಾ ಎಸ್.ಬಿ.ಹೆಚ್ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಬೇಕಾಗಿರುತ್ತದೆ. ಶುಲ್ಕ ಪಾವತಿಸಿದ ನಂತರ ಚಲನ್‌ 'ಅಭ್ಯರ್ಥಿ ಪ್ರತಿ'ಯನ್ನು ಇಟ್ಟುಕೊಂಡಿರತಕ್ಕದ್ದು.
  • ಅಭ್ಯರ್ಥಿಯ ಶುಲ್ಕ ಪಾವತಿಸಿದ ಮರುದಿನ ಪುನಃ ಇಲಾಖೆಯ ಅಧಿಕೃತ ವೆಬ್‌ಸೈಟ್ www.ksp.gov.in or rec16.ksponline.co.in ನ ಅಂಕಣದಲ್ಲಿ ಲಭ್ಯವಿರುವ ವೆಬ್‌ಪೇಜ್‌ನ My Application ನ್ನು ಕ್ಲಿಕ್ ಮಾಡಿ, ತನ್ನ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿದ ನಂತರ ಅರ್ಜಿ ತೆರೆಯುತ್ತದೆ ಹಾಗೂ ಅಭ್ಯರ್ಥಿಯು ಭರ್ತಿ ಮಾಡಿರುವ ಎಲ್ಲಾ ವಿವರಗಳನ್ನು ಒಳಗೊಂಡಂತೆ ಅರ್ಜಿಯು ಸೃಜನೆಯಾಗುತ್ತದೆ, ಭರ್ತಿ ಮಾಡಿದ ಆನ್-ಲೈನ್ ಅರ್ಜಿಯ ಪ್ರತಿಯನ್ನು ಪ್ರಿಂಟ್ ಮಾಡಿಟ್ಟುಕೊಳ್ಳತಕ್ಕದ್ದು. ಈ ಅರ್ಜಿ ಪ್ರತಿಯು ಮುಂದಿನ ನೇಮಕಾತಿ ಪ್ರಕ್ರಿಯೆಯ ಎಲ್ಲಾ ಹಂತಗಳಿಗೆ ಅವಶ್ಯಕವಾಗಿರುತ್ತದೆ.
  • ಆನ್-ಲೈನ್ ಮುಖಾಂತರ ದಿನಾಂಕ: 19.09.2016 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 13.10.2016ರ ಸಂಜೆ 06.00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷಾ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲು ದಿನಾಂಕ: 14/10/2016ರ ಬ್ಯಾಂಕ್ ಕಛೇರಿಯ ವೇಳೆಯು ಕೊನೆಯ ದಿನಾಂಕವಾಗಿರುತ್ತದೆ. ಶುಲ್ಕ ಪಾವತಿಸಿದ ಒಂದು ದಿನದ ನಂತರ ಇಂಟರ್‌ನೆಟ್‌ನ್ನು ವೀಕ್ಷಿಸಬೇಕು. ಅರ್ಹಗೊಳ್ಳದಿದ್ದಲ್ಲಿ ಶುಲ್ಕ ಪಾವತಿಸಿದ ಬ್ಯಾಂಕ್‌ನ್ನು ಸಂಪರ್ಕಿಸತಕ್ಕದ್ದು.
  • ನೇಮಕಾತಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ www.ksp.gov.in or rec16.ksponline.co.in ನ ಅಂಕಣದಲ್ಲಿ ಲಭ್ಯವಿರುವ "MY APPLICATION" ಮುಖಾಂತರ ಪಡೆದುಕೊಳ್ಳಲು ಸೂಚಿಸಲಾಗಿದೆ. ಉದಾಹರಣೆ: ಅರ್ಜಿ ಯಶಸ್ವಿಯಾಗಿರುವ ಕುರಿತು ಅರ್ಹತಾ ಪಟ್ಟಿ, ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಯ ದಿನಾಂಕ, ಕರೆಪತ್ರ/ಲಿಖಿತ ಪರೀಕ್ಷೆಯ ದಿನಾಂಕ, ಕರೆಪತ್ರಗಳು/ವೈದ್ಯಕೀಯ ಪರೀಕ್ಷೆಯ ದಿನಾಂಕ, ಕರೆಪತ್ರಗಳು ಇತ್ಯಾದಿ.