Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಭಾಗ ೫.]

ಬಂಡವಲು—ದ್ರವ್ಯಸಂಚಯ.

೨೦೩

ಯೆಲ್ಲ ಅಕ್ಷರಗಳು ಯಾವ ರೂಪಾಯಿಯ ಮೇಲೆಯೂ ಮೂಡುತ್ತಿದ್ದಿಲ್ಲ. ಬಾಗಲ ಕೋಟೆಯ ಟಂಕಸಾಲೆಯಿಂದ ಅದರ ಮಾಲಕನಿಗೆ ರೂಪಾಯಿಗೆ ಸುಮಾರು ಅರ್ಧಾ ಆಣೆಯಂತೆ ಲಾಭವಾಗುತ್ತಿತ್ತು,

ದ್ರವ್ಯ ಸಂಚಯ. — ವ್ಯಾಪಾರಸ್ಥರು, ಬಹಳ ಭೂಮಿಯನ್ನು ಮಾಡುವಂಥ ವೊಕ್ಕ ಲಿಗರು, ಚಿನಿವಾರರು, ವಕೀಲರು, ಮೇರದ ಸರಕಾರೀ ನೌಕರರು, ಕುರುಬರು, ಸಮ್ಮ ಗಾರರು, ಮುಂತಾದ ಜನರಲ್ಲಿ ದ್ರವ್ಯಸಂಚಯವು ಹೆಚ್ಚಾಗಲಿ ಕಡಿಮೆಯಾಗಲಿ ಆಗುತ್ತಿರುತ್ತದೆ. ದೊಡ್ಡ ದೊಡ್ಡ ಇನಾಮ ದಾರರಲ್ಲಿ ಸ್ವಲ್ಪ ಜನರನ್ನು ದೈವುಳ್ಳವರನ್ನು ಕಾಣ ಬಹುದು. ಆದರೆ ಇನಾಮದಾರರಿಗೆ ಯೇನು ಶ್ರಮ ಮಾಡದೆ ಕೂತಲ್ಲೇ ಬಹಳ ಹಣವು ಕೈಗೆ ಬರುತ್ತಿರುವ ಕಾರಣ ದುಡ್ಡಿನ ಬೆಲೆಯು ಅವರಿಗೆ ತಿಳಿಯುವದಿಲ್ಲ. ಆದ್ದರಿಂದ ಅವರ ಮನೆತನದ ವೆಚ್ಚವು ಬಹಳ ಅಸ್ತವ್ಯಸ್ತ ಇರುತ್ತದೆ. ಲಗ್ನ ಮುಹೂರ್ತಗಳಿಗಾಗಿ ಸಾಲ ಮಾಡದಂಥ ಇನಾಮದಾರರು ಬಹು ಸ್ವಲ್ಪ ಜನರುಂಟು.

ಉತ್ತಮ ಕುಲದ ಹಿಂದೂ ಜನರು ಯೆಲ್ಲ ವಿಧದ ವ್ಯಾಪಾರ ಮಾಡುತ್ತಾರೆ. ಇಂಥ ವರು ಇಂಥಾ ವ್ಯಾಪಾರ ಮಾಡ ತಕ್ಕವರೆಂಬ ನಿರ್ಬಂಧವಿಲ್ಲ. ಎಲ್ಲಕ್ಕೂ ಮೊದಲು ಬಡ್ಡಿಯ ವ್ಯಾಪಾರಕ್ಕೆ ಬಹು ಜನರು ಹವಣಿಸುತ್ತಾರೆ. ಯಾಕಂದರೆ ಅದಕ್ಕೆ ಶ್ರಮ ಮಾಡುವ ಪ್ರಯೋಜನವಿಲ್ಲ, ಇದ್ದಷ್ಟು ಹಣದಿಂದ ವ್ಯಾಪಾರ ಸಾಗುತ್ತದೆ. ಲೆಕ್ಕ ಪತ್ರದ ಗೊಂದಲವಿಲ್ಲ, ಬಹಳ ಬುದ್ಧಿಯನ್ನು ಹಾಕುವ ಪ್ರಯೋಜನವಿಲ್ಲ, ಸಾಲ ಬೇಡುವ ಗಿರಾ ಕಿಗಳು ಹೇರಳವಾಗಿ ದೊರಿಯುತ್ತವೆ. ಆದರೆ ದೊಡ್ಡ ಗ್ರಾಮಗಳಲ್ಲಿ ಇರುವ ಬಣಜಿ ಗರು, ಕೊಮಟಿಗರು, ನಾರ್ವೆಕರರು, ಗುಜ್ಜರು, ಮುಂತಾದವರು ಚಿಕ್ಕ ತಕ್ಕಡೀ ಅಂಕಡಿಯನ್ನು ಹಚ್ಚುವದು ಬಹಳ, ಬ್ರಾಹ್ಮಣರು ಹೆಚ್ಚಾಗಿ ಬಡ್ಡಿ, ಬೆಳ್ಳಿ ಬಂಗಾರಗಳ ಮಾರಾಟ, ಹುಂಡಿ, ಅರಿವೆಯ ಅಂಗಡಿ, ಮುಂತಾದ ಕೂತಲ್ಲೇ ನಡಿಯುವಂಥ ವ್ಯವ ಹಾರಗಳನ್ನು ಮಾಡುವರು. ಆದರೆ ಮದ್ಯ ಮಾಂಸಗಳ ವಿಕ್ರಯ, ಯಾವದಾದರೂ ಬಗೆಯ ಚರ್ಮದ ವ್ಯಾಪಾರ, ನೆಣದ ಮಾರಾಟ, ಇಂಥಾ ನೀಚತನದ ವ್ಯಾಪಾರಗಳನ್ನು ಉತ್ತಮ ಕುಲದವರು ಮಾಡುವದಿಲ್ಲ.

ಸಂಚಿತದ ಉಪಯೋಗ. - ಸಾಲ ಕೊಡುವದು, ವ್ಯಾಪಾರ, ಭೂಮಿ ಮನೆಗ ಳನ್ನು ಕೊಳ್ಳುವದು, ಆಭರಣಗಳನ್ನು ಮಾಡಿಸುವದು, ಇವೇ ಹಣವನ್ನು ಉಪಯೋಗಿ ಸುವ ಮುಖ್ಯ ಮಾರ್ಗಗಳು, ಆಭರಣಗಳಲ್ಲಿ ಯೆಲ್ಲಕ್ಕೂ ಹೆಚ್ಚು ದುಡ್ಡು ತೊಡಕುತ್ತದೆ. ಬಳಿಯಲ್ಲಿ ನೂರು ರೂಪಾಯಿ ಶಿಲಕು ಉಳಿದರೆ, ಅದರಲ್ಲಿ ಅರ್ಧಕ್ಕರ್ಧ ಹಣ ಆಭರಣ ಗಳಲ್ಲಿ ಹಾಕುವವರೇ ಬಹು ಜನರು. ಇನಾಮದಾರರೂ ಸರಕಾರೀ ನೌಕರರೂ ವಕೀ ಲರೂ ತಮ್ಮ ಬಳಿಯಲ್ಲಿಯ ಬಹುತರ ಯಾವತ್ತು ಹಣವನ್ನು ಆಭರಣಗಳಲ್ಲಿ ಯೇ ಹಾಕುತ್ತಾರೆಂದು ಹೇಳಿ ಬಹುದು. ಈ ಜನರೊಳಗೆ ಆದಾಯದ ವ್ಯವಸಾಯಗಳಲ್ಲಿ * ಹಣ ಹಾಕುವಂಥವನು ಹತ್ತರಲ್ಲಿ ವೊಬ್ಬ ದೊರಿಯುವದು ದುರ್ಲಭವು, ಸರಕಾರೀ