Benchmarks
View scores and output across OCR models spanning many document categories.
Want to run these evals on your own documents?
Talk to Salesಕರ್ನಾಟಕ ಸರ್ಕಾರ
ಸಂಖ್ಯೆ:ಗ್ರಾಅಪ:26:ಗ್ರಾವಿಯೋ:2015
ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 19.10.2016
ತಿದ್ದುಪಡಿ ಆದೇಶ
ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ
ಸಂ.ಗ್ರಾಅಪ:63:ಗ್ರಾವಿಯೋ:2015, ದಿನಾಂಕ: 14-10-2015 ರ ಆದೇಶದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು
ವಿಧಾನಸಭಾ ಕ್ಷೇತ್ರದಲ್ಲಿ ಕೆಳಕಂಡ ಪಟ್ಟಿಯಂತೆ ಗ್ರಾಮಗಳನ್ನು ಅನುಮೋದಿಸಿ ಅನುದಾನ ನಿಗಧಿಪಡಿಸಿ ಆದೇಶ
ಹೊರಡಿಸಲಾಗಿತ್ತು.
(ರೂ. ಲಕ್ಷಗಳಲ್ಲಿ)
| ಜಿಲ್ಲೆ | ವಿಧಾನ ಸಭಾ ಕ್ಷೇತ್ರ | ಗ್ರಾಮಗಳ ಹೆಸರು | ಗ್ರಾಮವಾರು ನಿಗದಿಪಡಿಸಿದ ಅನುದಾನ |
|---|---|---|---|
| ದಾವಣಗೆರೆ | ಜಗಳೂರು | ಚಿಕ್ಕಬಂಟನಹಳ್ಳಿ | 54.15 |
| ತಮಲೇಹಳ್ಳಿ | 214.95 | ||
| ಉಡ್ಲಕಟ್ಟೆ | 63.00 | ||
| ತಿಮ್ಲಾಪುರ | 42.90 | ||
| ಒಟ್ಟು | 375.00 | ||
ಮಾನ್ಯ ಶಾಸಕರು, ಜಗಳೂರು ವಿಧಾನಸಭಾ ಕ್ಷೇತ್ರ ಇವರು ದಿನಾಂಕ: 17.08.2016 ಮತ್ತು
25.08.2016 ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ಮೇಲ್ಕಂಡ 4 ಗ್ರಾಮಗಳೊಂದಿಗೆ ಹೆಚ್ಚುವರಿಯಾಗಿ ಒಂದು
ಗ್ರಾಮವಾದ ಪುಣಭಗಟ್ಟ ಗ್ರಾಮವನ್ನು ಯೋಜನೆಗೆ ಪರಿಗಣಿಸಿ ಆಯ್ಕೆಗೆ ಪರಿಗಣಿಸಿ ಈ ಹಿಂದೆ ತಮಲೇಹಳ್ಳಿ
ಗ್ರಾಮಕ್ಕೆ ನಿಗಧಿಪಡಿಸಲಾಗಿದ್ದ ರೂ. 214.95 ಲಕ್ಷ ಅನುದಾನದಿಂದ ಪುಣಭಗಟ್ಟ ಗ್ರಾಮಕ್ಕೆ ರೂ. 100.00 ಲಕ್ಷಗಳ
ಅನುದಾನವನ್ನು ಪುನರ್ ಹಂಚಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿರುವುದನ್ನು ಸರ್ಕಾರ ಪರಿಶೀಲಿಸಿದೆ ಮತ್ತು ಅದರಂತೆ
ಗ್ರಾಮ ವಿಕಾಸ ಯೋಜನೆಯನ್ನು ಅನುಷ್ಠಾನಗೊಳಿಸಲು ತಿರ್ಮಾನಿಸಿದೆ. ಆದ್ದರಿಂದ ಮೇಲಿನ ಪಟ್ಟಿಯಲ್ಲಿನ
ಗ್ರಾಮಗಳು ಹಾಗೂ ಅನುದಾನ ವಿವರಗಳ ಬದಲಾಗಿ ಕೆಳಕಂಡ ಪಟ್ಟಿಯಲ್ಲಿರುವಂತೆ ಗ್ರಾಮಗಳು ಹಾಗೂ
ನಿಗಧಿಪಡಿಸಿದ ಅನುದಾನದಂತೆ
(ರೂ. ಲಕ್ಷಗಳಲ್ಲಿ)
| ಜಿಲ್ಲೆ | ವಿಧಾನ ಸಭಾ ಕ್ಷೇತ್ರ | ಗ್ರಾಮಗಳ ಹೆಸರು | ಗ್ರಾಮವಾರು ನಿಗದಿಪಡಿಸಿದ ಅನುದಾನ |
|---|---|---|---|
| ದಾವಣಗೆರೆ | ಜಗಳೂರು | ಚಿಕ್ಕಬಂಟನಹಳ್ಳಿ | 54.15 |
| ತಮಲೇಹಳ್ಳಿ | 114.95 | ||
| ಉಡ್ಲಕಟ್ಟೆ | 63.00 | ||
| ತಿಮ್ಲಾಪುರ | 42.90 | ||
| ಪುಣಭಗಟ್ಟ | 100.00 | ||
| ಒಟ್ಟು | 375.00 | ||
ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಬೂವನಹಳ್ಳಿ ನಾಗರಾಜ್)
ನಿರ್ದೇಶಕರು (ಸುಗಾಯೋ) ಹಾಗೂ
ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
ಇವರಿಗೆ:
- ಮಹಾಲೇಖಪಾಲರು (ಲೆಕ್ಕಪತ್ರ) ಕರ್ನಾಟಕ, ಬೆಂಗಳೂರು.
1