Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

-2-

2405-00-789-0-03 ಅಡಿ ಮಾಡಿರುವ ಅವಕಾಶದಿಂದ ಭರಿಸಿ ಯೋಜನೆಗಳನ್ನು ಅನುಷ್ಠಾನ
ಗೊಳಿಸಲು ಆದೇಶ ನೀಡಬಹುದಾಗಿರುತ್ತದೆ. ಅದೇ ರೀತಿ, ಗಿರಿಜನ ಉಪ ಯೋಜನೆಯಡಿಯಲ್ಲಿ
ಪ್ರಸ್ತಾಪಿಸಿರುವ ರೂ.65.00ಲಕ್ಷಗಳ ಯೋಜನೆ ಈಗಾಗಲೇ ಮಂಜೂರಾಗಿರುವ ಯೋಜನೆಗಳಡಿಯಲ್ಲಿ
ಬರುತ್ತಿರುವುದರಿಂದ, ಈ ಬಗ್ಗೆ ಯಾವುದೇ ಕ್ರಮ ಇಲ್ಲ. ರೂ. 89.00 ಲಕ್ಷಗಳ ಯೋಜನೆಗಳನ್ನು
ಲೆಕ್ಕ ಶೀರ್ಷಿಕೆ 2405-00-800-0-27 ಉಪ ಶೀರ್ಷಿಕೆ-106-ಸಹಾಯಧನ (ಯೋಜನೆ)
ಅಡಿಯಲ್ಲಿ ಉಳಿತಾಯವಾಗುವ ಅನುದಾನದಿಂದ ಪುನರ್‌ವಿನಿಯೋಗ ಮಾಡಿಕೊಡಲು ಮಾಡಿರುವ
ಬೇಡಿಕೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತಿದೆ. ಉಳಿದ ರೂ.210.75 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ
2405-00-796-0-00 ರಡಿ ಮಾಡಿರುವ ಅವಕಾಶದಿಂದ ಭರಿಸಿ ಅನುಷ್ಠಾನಗೊಳಿಸಲು ಆದೇಶ
ನೀಡಬಹುದಾಗಿರುತ್ತದೆ. ಅದರಂತೆ ಈ ಆದೇಶ.

ಆದೇಶ ಸಂಖ್ಯೆ: ಪಸಂಮೀ/161/ಮೀಇಯೋ/2010(ಭಾಗ-1), ಬೆಂಗಳೂರು ದಿನಾಂಕ:21-08-2010

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, 2010-11ನೇ ಸಾಲಿನಲ್ಲಿ ಮೀನುಗಾರಿಕೆ
ಇಲಾಖೆಗೆ ವಿಶೇಷ ಘಟಕ ಯೋಜನೆಯ ಲೆಕ್ಕ ಶೀರ್ಷಿಕೆ 2405-00-789-0-03-422-ವಿಶೇಷ
ಘಟಕ ಯೋಜನೆ (ಯೋಜನೆ) ಅಡಿ ಒದಗಿಸಿರುವ ರೂ.527.87 ಲಕ್ಷಗಳ (ಐನೂರ ಇಪ್ಪತ್ತೇಳು
ಲಕ್ಷದ ಎಂಬತ್ತೇಳು ಸಾವಿರ ರೂಪಾಯಿಗಳು ಮಾತ್ರ) ವೆಚ್ಚದಲ್ಲಿ ಮತ್ತು ಗಿರಿಜನ ಉಪ
ಯೋಜನೆಯ ಲೆಕ್ಕ ಶೀರ್ಷಿಕೆ 2405-00-796-0-00-423-ಗಿರಿಜನ ಉಪಯೋಜನೆ (ಯೋಜನೆ)
ಅಡಿ ರೂ.210.75 ಲಕ್ಷಗಳ (ಇನ್ನೂರ ಹತ್ತು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು
ಮಾತ್ರ) ವೆಚ್ಚದಲ್ಲಿ ಈ ಆದೇಶದ ಅನುಬಂಧ-1 ಮತ್ತು 2ರಲ್ಲಿ ನಮೂದಿಸಿರುವ ವಿಶೇಷ
ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು
ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

[Signature]
(ಡಿ.ಎಂ. ರಾವ್) 21/8/10

ಸರ್ಕಾರದ ಅಧೀನ ಕಾರ್ಯದರ್ಶಿ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ(ಮೀ)
ಇವರಿಗೆ:

ಇವರಿಗೆ:

  1. ಮಹಾಲೇಖಪಾಲರು (ಎ ಮತ್ತು ಇ), ಕರ್ನಾಟಕ, ಬೆಂಗಳೂರು.
  2. ಮೀನುಗಾರಿಕೆ ನಿರ್ದೇಶಕರು, ಬೆಂಗಳೂರು.
  3. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-4 ಮತ್ತು 5)
  4. ಎಲ್ಲಾ ಮೀನುಗಾರಿಕೆ ಉಪ ನಿರ್ದೇಶಕರಗಳಿಗೆ (ಮೀನುಗಾರಿಕೆ ನಿರ್ದೇಶಕರ ಮುಖಾಂತರ)
  5. ಜಂಟಿ ನಿರ್ದೇಶಕರು, ಖಜಾನೆ ಗಣಕ ಜಾಲ ನಿರ್ವಹಣಾ ಕೇಂದ್ರ, ಖಜಾನೆ ಭವನ,
    ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
  6. ಆಂತರಿಕ ಆರ್ಥಿಕ ಸಲಹೆಗಾರರು, ಕೃ.ತೋ. ಮತ್ತು ಪ.ಸಂ.ಮೀ. ಇಲಾಖೆ.
  7. ಖಜಾನಾಧಿಕಾರಿ, ರಾಜ್ಯ ಮುಖ್ಯ ಖಜಾನೆ, ಬೆಂಗಳೂರು.
  8. ಸಂಬಂಧಪಟ್ಟ ಎಲ್ಲಾ ಖಜಾನೆ ಅಧಿಕಾರಿಗಳಿಗೆ (ಮೀನುಗಾರಿಕೆ ನಿರ್ದೇಶಕರ ಮುಖಾಂತರ)
  9. ರಕ್ಷಾ ಕಡತ: ಹೆಚ್ಚಿನ ಪ್ರತಿಗಳು.