Benchmarks
View scores and output across OCR models spanning many document categories.
Want to run these evals on your own documents?
Talk to Salesಕರ್ನಾಟಕ ಸರ್ಕಾರ
ಸಂಖ್ಯೆ/ಪಪೂಶಿ/ಜಂ.ನಿ(ಆಶಾ)/ಪರೀಕ್ಷೆ/2011-12
ಆಯುಕ್ತರ ಕಛೇರಿ,
ಪದವಿ ಪೂರ್ವ ಶಿಕ್ಷಣ ಇಲಾಖೆ,
ಸಂಪಿಗೆ ರಸ್ತೆ, 18ನೇ ಕ್ರಾಸ್,
ಮಲ್ಲೇಶ್ವರಂ, ಬೆಂಗಳೂರು-12,
ದಿನಾಂಕ: 21-02-2012.
ಪ್ರಕಟಣೆಗಾಗಿ
2012 ರ ಮಾರ್ಚನಲ್ಲಿ ನಡೆಸುವ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾಗಲಿರುವ
ಹೊಸಬರು (Regulars), ಪುನರಾವರ್ತಿತ (Repeaters) ಮತ್ತು ಖಾಸಗಿ ಅಭ್ಯರ್ಥಿಗಳ (Private
Candidates) ಪ್ರವೇಶ ಪತ್ರಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ
ಕಛೇರಿಗಳಿಗೆ ಕಳುಹಿಸಿಕೊಡಲಾಗಿದೆ. ಪ್ರಾಂಶುಪಾಲರು ಆಯಾ ಜಿಲ್ಲಾ ಪದವಿ ಪೂರ್ವ ಶಿಕ್ಷಣ
ಇಲಾಖೆಯ ಉಪನಿರ್ದೇಶಕರ ಕಛೇರಿಗಳಿಂದ ಪ್ರವೇಶ ಪತ್ರಗಳನ್ನು ಪಡೆದುಕೊಂಡು ಅಭ್ಯರ್ಥಿಗಳಿಗೆ
ವಿತರಿಸಲು ಸೂಚಿಸಿದೆ.
ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಸಗಿ ಅಭ್ಯರ್ಥಿಗಳಾಗಿ
(Private Candidates) ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳಿಗೆ ಮಾತ್ರ ಈ ಭಾರಿ ಅವರು
ನೋಂದಾಯಿಸಿಕೊಂಡಿರುವ ಕಾಲೇಜುಗಳ ಸಮೀಪದಲ್ಲಿನ ಖಾಸಗಿ ಪದವಿ ಪೂರ್ವ ಕಾಲೇಜುಗಳ
ಪರೀಕ್ಷಾ ಕೇಂದ್ರಗಳಿಗೆ Randomisation ಮಾಡಿ ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಸಂಬಂಧಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಖಾಸಗಿ
ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಬೇಕಾದ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಸಹ ಸೂಚಿಸಿದೆ.
Rashmill
ಆಯುಕ್ತರು,
ಪದವಿ ಪೂರ್ವ ಶಿಕ್ಷಣ ಇಲಾಖೆ.