Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಉ) ಯಶಸ್ವಿ ಗುತ್ತಿಗೆದಾರರು ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಿ ಕಾರ್ಯಗತಗೊಳಿಸಬೇಕು. ತದನಂತರ 5 ವರ್ಷಗಳ ಕಾಲ ಸದರಿ ಯೋಜನೆಯ ಸಂಪೂರ್ಣ ನಿರ್ವಹಣೆ ಹಾಗೂ ಕಾರ್ಯಾಚರಣೆ ಜವಾಬ್ದಾರಿಯನ್ನು (ವಿದ್ಯುತ್ ಶುಲ್ಕ ಹೊರತುಪಡಿಸಿ) ಸದರಿ ಸಂಸ್ಥೆ ನಿರ್ವಹಿಸತಕ್ಕದ್ದು.

ಊ) ಯೋಜನಾ ವ್ಯಾಪ್ತಿಯ ಜನವಸತಿಗಳಿಗೆ 55 LPCD ನೀರನ್ನು ಒದಗಿಸುವುದು. ಯಾವುದೇ ಕಾರಣಕ್ಕೂ ಅನುಮೋದಿತ ಯೋಜನಾ ಅಂದಾಜು ವೆಚ್ಚದಲ್ಲಿ ಹೆಚ್ಚಳವಾದಲ್ಲಿ ಗುತ್ತಿಗೆದಾರರೇ ಅಂತಹ ಹೆಚ್ಚಳ ಭರಿಸತಕ್ಕದ್ದು.

ಋ)ಗುತ್ತಿಗೆದಾರರು ಸಿದ್ಧಪಡಿಸುವ ಡಿ.ಪಿ.ಆರ್‌ಗೆ ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರ ಹಂತದಲ್ಲಿರುವ DBOT ತಾಂತ್ರಿಕ ಸಮಿತಿ, ತಾಂತ್ರಿಕ ಸಿಂಧುತ್ವವನ್ನು ಪರಿಶೀಲಿಸಿ ದೃಢೀಕರಿಸಬೇಕು. ಹೀಗೆ ದೃಢೀಕರಿಸುವಾಗ ವಾಸ್ತವಿಕವಾಗಿ ಅಗತ್ಯವಿರುವ ಪ್ರಮಾಣದ ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ವಿನ್ಯಾಸಗಳು ಮತ್ತು ಕಾಮಗಾರಿಗಳು ಪೂರಕವಾಗಿರುವುದನ್ನು ದೃಢಪಡಿಸಿಕೊಳ್ಳಬೇಕು.

ಎ) ಈ ಯೋಜನೆಯ ಕಾಮಗಾರಿಯನ್ನು 18 ತಿಂಗಳ ಕಾಲಮಿತಿಯೊಳಗೆ ಅನುಷ್ಠಾನಗೊಳಿಸತಕ್ಕದ್ದು. ಯಾವುದೇ ವಿಳಂಬಕ್ಕೆ ಅವಕಾಶವೀಯ ಕೂಡದು ಯೋಜನೆಯ ಘಟಕದಲ್ಲಿನ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ ಅವಕಾಶವಿರುವುದಿಲ್ಲ. ಬಲ್ಕವಾಟರ್ ಮೀಟರ್‌ಗಳನ್ನು ಎಲ್ಲಾ ಜನವಸತಿಗಳ OHT ಬಳಿ ಅಳವಡಿಸತಕ್ಕದ್ದು.

ಏ) ಯೋಜನಾ ಅಂದಾಜು ಮೊತ್ತದ ಕನಿಷ್ಠ 10%ನ್ನು ಯೋಜನೆ ಕಾರ್ಯಗತಗೊಳಿಸಿ ತೃಪ್ತಿಕರ O&M ವ್ಯವಸ್ಥೆ ನಿರೂಪಿಸುವ ಕಾರ್ಯಕ್ಷಮತೆ ಆಧರಿಸಿ ನಂತರ ಗುತ್ತಿಗೆದಾರರಿಗೆ ಪಾವತಿಸಬೇಕು.

ಐ) ಈ ಯೋಜನೆಯ ಮುಖ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ನಂತರ, ಅವುಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಮತ್ತು PMC ವರದಿ ಆಧರಿಸಿ ಅನುಮೋದಿತ ToR ಹಾಗೂ ಟೆಂಡರ್ ಕರಾರಿನಂತೆ ನಿಯಮಾನುಸಾರ ಬಿಲ್ ಪಾವತಿಸಲು ಅನುಷ್ಠಾನಾಧಿಕಾರಿಗಳು ಹಾಗೂ ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರು ಕ್ರಮವಹಿಸಬೇಕು. ಕಾಮಗಾರಿಯ ಕಾಲಕಾಲಿಕ ಪ್ರಗತಿ ಮತ್ತು ಗುಣಮಟ್ಟ ಪರಿಶೀಲಿಸಿ ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ವರದಿ ಮಾಡತಕ್ಕದ್ದು.

ಒ) ಈ ಯೋಜನೆಯ ವಿನ್ಯಾಸದ ಕಾರ್ಯಸಿಂಧುತ್ವ ಪರಿಶೀಲಿಸುವುದು, ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಗೊಳಿಸುವುದು ಮತ್ತು ಯೋಜನೆಯ ಕಾಮಗಾರಿಗಳ ಗುಣಮಟ್ಟ ಪರಿವೀಕ್ಷಣೆ ಸಲುವಾಗಿ ಅಗತ್ಯವಿರುವ ಯೋಜನಾ ಉಸ್ತುವಾರಿ ಘಟಕವನ್ನು ಟೆಂಡರ್ ಮುಖೇನ ಗೊತ್ತುಪಡಿಸಿ, ಸರ್ಕಾರದ ಅನುಮೋದನೆ ಪಡೆಯಲು ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜರೂರಾಗಿ ಕ್ರಮವಹಿಸತಕ್ಕದ್ದು.

ಓ) ಮೇಲ್ಕಂಡ ಅನುಮೋದಿತ ಮೊತ್ತ DBOT ತಾಂತ್ರಿಕ ಸಮಿತಿ ದೃಢೀಕರಿಸುವ ಯೋಜನೆಯ ಮುಖ್ಯ ಕಾಮಗಾರಿಗಳ ವಾಸ್ತವಿಕ ಅಂದಾಜು ಮೊತ್ತದ ನಿಬಂಧನೆಗೊಳಪಟ್ಟಿರುತ್ತದೆ. ಅಂತೆಯೇ, ಅನುಮೋದಿತ ಸಂಸ್ಥೆಯೊಡನೆ MoU/ಕರಾರು ಪತ್ರ ಮಾಡಿಕೊಳ್ಳುವ ಮೊದಲು ಗರಿಷ್ಠ ಮಿತವ್ಯಯ ಅಳವಡಿಸಿ, ಸರ್ಕಾರದ ಅನುಮತಿ ಪಡೆದು ಯೋಜನೆಯ ಅನುಷ್ಠಾನ ಕುರಿತು ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರು ಮುಂದಿನ ಕ್ರಮವಹಿಸತಕ್ಕದ್ದು.

3

(Signature Mark)
22/11