Benchmarks
View scores and output across OCR models spanning many document categories.
Want to run these evals on your own documents?
Talk to Salesವ್ಯವಸ್ಥೆ ಬೇರೆ ಇತ್ತು. ಮರಕ್ಕೆ ಕೆಲವು ಅಡಿ ದೂರದಲ್ಲಿ ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು. ಮೊದಲೆ ದಣಿವಾಗಿತ್ತು. ಬಿದ್ದ ಪೆಟ್ಟಿಗೆ ಪ್ರಜ್ಞೆ ತಪ್ಪಿತು.
ಕೆಲವು ನಿಮಿಷಗಳಾದ ಮೇಲೆ ಮೂರ್ಛ ತಿಳಿಯಿತು. ಆದರೂ ಆಗ ಅವರಲ್ಲಿ ಯಾವುದೊಂದು ಇಂದ್ರಿಯವೂ ಚುರುಕಾಗಿ ಕೆಲಸ ಮಾಡುತ್ತಿರಲಿಲ್ಲ, ಮನಸ್ಸು ಅಸ್ಪಷ್ಟ ಸ್ಥಿತಿಯಲ್ಲಿತ್ತು ; ಕಣ್ಣೂ ಮಂಜು ಮಂಜು. ಎಷ್ಟು ಹೊತ್ತು ಆ ಸ್ಥಿತಿಯಲ್ಲಿದ್ದರೋ ಅವರಿಗಂತೂ ತಿಳಿಯದು. ಎಚ್ಚೆತ್ತಾಗ ಅವರ ಬಳಿಯಲ್ಲಿ ನಾಲೈದು ಜನ ನಿಂತಿದ್ದರು. ತಮ್ಮ ಮುಖವೆಲ್ಲಾ ಒದ್ದೆಯಾಗಿತ್ತು, ಇನ್ನೂ ಯಾರೋ ನೀರು ಚಿಮುಕಿಸುತ್ತಲೇ ಇದ್ದರು.
ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದದ್ದು ಇಷ್ಟು ; ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರದಾರಿಯಿದೆ ಎನ್ನುವಾಗ ಎತ್ತುಗಳು ಏನು ಮಾಡಿದರೂ ಮುಂದೆ ಹೋಗದೆ ಕಣಿ ಹಾಕಿಕೊಂಡವು. ಅದೇ ವೇಳೆಗೆ ಎದೆ ನಡುಗುವಂತೆ ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳ ಘಂಟೆಯ ಶಬ್ದವನ್ನು ಕೇಳಿದ ಹುಲಿ ಕೆಲವು ನಿಮಿಷ ತಡೆದು ನೋಡಿತು. ಆದರೆ ರೈತರ ಮಾತು ಕೇಳಿಬಂದ ಮೇಲೆ ನಿರಾಶೆಯಿಂದಲೂ ಕೋಪದಿಂದಲೂ ಗರ್ಜಿಸಿ ಪಲಾಯನ ಮಾಡಿತು. ಗಾಡಿಯವರು ಐದು ಜನವಿದ್ದರೂ ಎಷ್ಟೇ ಆಗಲಿ ಹುಲಿಯೆಂದರೆ ಭಯವಲ್ಲವೆ! ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದರು. ಮತ್ತೆ ಗರ್ಜನೆ ಕೇಳಲಿಲ್ಲ. ಅನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರಿದರು. ಮೂರ್ಛಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚ್ಚರಿಸಿದರು.
ಮೊದಲೇ ಹೇಳಿದಂತೆ ಶಾನುಭೋಗರು ಗಟ್ಟಿಮನಸ್ಸಿನವರು. ಬೇಗ ಚೇತರಿಸಿಕೊಂಡೆದ್ದು ನಡೆದ ಸಂಗತಿಯನ್ನೆಲ್ಲಾ ನೆನಪಿಗೆ ತಂದುಕೊಂಡರು. ಮೈಕೈ ಸ್ವಲ್ಪ ನಡುಗುತ್ತಿತ್ತೇ ಹೊರತು ಅವರಿಗೆ ಮೈಯಲ್ಲಿ ಗಾಯವೇನೂ ಆಗಿರಲಿಲ್ಲ. ಹುಲಿಯ ಭಯವೇನೋ ಕಳೆದಿತ್ತು, ಖಿರ್ದಿ ಪುಸ್ತಕವನ್ನೂ ಮತ್ತೆ ಪಡೆದು ಭದ್ರಮಾಡಿಕೊಂಡದ್ದಾಯಿತು. ಆದರೆ ಅವರ ಮನಸ್ಸನ್ನೆಲ್ಲಾ ವಿಸ್ಮಯ ಆವರಿಸಿತ್ತು. ತಾವು ಉಳಿದದ್ದು ಹೇಗೆ? ನಿಸ್ಸಹಾಯರಾಗಿ ಪ್ರಜ್ಞೆಯಿಲ್ಲದೆ ಬಿದ್ದಿದ್ದಾಗ ಹುಲಿ ತಮ್ಮನ್ನು ಎಳೆದುಕೊಂಡು ಹೋಗಲಿಲ್ಲವೇಕೆ? ಸ್ವಲ್ಪ ಹೊತ್ತು ಯೋಚಿಸಿ ಗಾಡಿಯವರನ್ನು ಕೇಳಿದರು. “ನಾನು ಮುಖ ಮೇಲಾಗಿ ಬಿದ್ದಿದ್ದೆನೆ?” ಎಂದು. ಇಲ್ಲ, ಅವರು ಬಿದ್ದಿದ್ದದ್ದು ಬೆನ್ನು ಮೇಲಾಗಿ. ಶಾನುಭೋಗರ ಸಮಸ್ಯೆಗೆ ಉತ್ತರ ದೊರೆತಂತಾಯಿತು. ಕೊನೆಯವರೆಗೂ ಆ ಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೇ ಬಂದಿತ್ತು! ಉದಾರಹೃದಯರಾದ ಶಾನುಭೋಗರ ಬಾಯಿಂದ 'ಭಲೆ' ಎಂಬ ಮೆಚ್ಚಿಕೆಯ ಮಾತು ಹೊರಟಿತು. ಸಂದರ್ಭವನ್ನರಿಯದೆ, “ಈ ಶಾನುಭೋಗರಿಗೆ ಹುಚ್ಚು ಹಿಡಿಯಿತೋ” ಎನ್ನುವಂತೆ ನೋಡುತ್ತಿದ್ದ ಗಾಡಿಯವರಿಗೆ ಅಂದಿನ ಕಥೆಯನ್ನೆಲ್ಲ ಹೇಳಿದರು.
ಶಾನುಭೋಗರು “ಕುಡಿದ ನೀರು ಅಲುಗದ ಹಾಗೆ” ಎನ್ನಲಾಗದಿದ್ದರೂ ಜೀವ ಸಹಿತ ಮನೆ ಸೇರಿಕೊಂಡರು. ರಸದೂಟವನ್ನು ಮಾಡಿದರು. "ಹುಲಿ ಈಗ ಎಷ್ಟು ಹಸಿದಿರಬೇಕು” ಎಂಬ ಯೋಚನೆ ಬಂದಾಗ ಅವರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು; ಊಟದ ರುಚಿ ಇಮ್ಮಡಿಯಾಯಿತು. ಅವರಿಗೆ ಅರೆ ನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ಪ್ರಾಣವನ್ನು ಕಾಪಾಡಿದ ಆ ಖಿರ್ದಿ ಪುಸ್ತಕ
20