Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಸರ್ಕಾರವು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂ: ಸಿಐ 72 ಸಪ್ರಕ್ಕೆ 2016 ದಿನಾಂಕ: 06.09.2016

ಭಾರತ ಸರ್ಕಾರದ ಎಂಎಸ್‌ಸಿ-ಸಿಡಿಪಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಈ ಕೆಳಕಂಡಂತೆ ಪ್ರಾಜೆಕ್ಟ್ ಸ್ಟೀರಿಂಗ್ ಕಮಿಟಿಯನ್ನು ರಚಿಸಿ ಆದೇಶಿಸಲಾಗಿದೆ.

1 ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಂಎಸ್‌ಎಂಇ), ಕರ್ನಾಟಕ ಸರ್ಕಾರ ಅಧ್ಯಕ್ಷರು
2 ವ್ಯವಸ್ಥಾಪಕ ನಿರ್ದೇಶಕರು, ಕೆಸಿಟಿಯು (ಅನುಷ್ಠಾನ ಸಂಸ್ಥೆ) ಸದಸ್ಯ ಕಾರ್ಯದರ್ಶಿ/
ಕನ್ವನ‌ರ್.
3 ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ) (ಒಂದು ಪಕ್ಷ ಇವರು ಬೇರೆ ಕೆಲಸದ ನಿಮಿತ್ತ ಸಭೆಗೆ ಹಾಜರಾಗದಿದ್ದಲ್ಲಿ ಅವರ ಪ್ರತಿನಿಧಿಯಾಗಿ ಈ ವಿಷಯವನ್ನು ಅರಿತ ಅಧೀನ ಕಾರ್ಯದರ್ಶಿ, ಅಥವಾ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳು ಭಾಗವಹಿಸುವುದು). ಸದಸ್ಯರು
4 ನಿರ್ದೇಶಕರು, ಎಂಎಸ್‌ಎಂಇ - ಅಭಿವೃದ್ಧಿ ಸಂಸ್ಥೆ ಸದಸ್ಯರು
5 ಜಂಟಿ ನಿರ್ದೇಶಕರು, ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ). ಸದಸ್ಯರು
6 ಕೈಗಾರಿಕಾಭಿವೃದ್ಧಿ ಆಯುಕ್ತರು (ಒಂದು ಪಕ್ಷ ಇವರು ಬೇರೆ ಕೆಲಸದ ನಿಮಿತ್ತ ಸಭೆಗೆ ಹಾಜರಾಗದಿದ್ದಲ್ಲಿ. ಅವರ ಪ್ರತಿನಿಧಿಯಾಗಿ ಈ ವಿಷಯವನ್ನು ಅರಿತ ನಿರ್ದೇಶಕರು ಅಥವಾ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳು ಭಾಗವಹಿಸುವುದು). ಸದಸ್ಯರು

ಕೇಂದ್ರ ಸರ್ಕಾರದ ಅಧಿಕೃತ ಜ್ಞಾಪನ ಸಂ: 1(634)/CDD/ Guidelines Modification/2016 D: 27.07.2016ರನ್ವಯ ಈ ಸಮಿತಿಯನ್ನು ರಚಿಸಲಾಗಿದೆ.

ಅನುಷ್ಠಾನ ಸಂಸ್ಥೆಯು ಪ್ರತಿ ತಿಂಗಳು ಪ್ರತಿಯೊಂದು ಕ್ಲಸ್ಟರಿನ ಛಾಯಚಿತ್ರಗಳೊಂದಿಗೆ ಮಾಹಿತಿಗಳನ್ನು ಇ-ಸಮೀಕ್ಷಾ ಪೋರ್ಟಲ್‌ನಲ್ಲಿ ವಿವರಗಳನ್ನು ಅಳವಡಿಸಲು ಸಂಬಂಧಪಟ್ಟ ಎಂಎಸ್‌ಎಂಇ–ಡಿಐ ರವರಿಗೆ ಒದಗಿಸುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

Sd/-
[ಎಸ್.ನಾಗರಾಜ]
ದಿನಾಂಕ: 06/09/2016
ಪೀಠಾಧಿಕಾರಿ [ಸಪ್ರಕೈ],
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಇವರಿಗೆ:

  1. ಪ್ರಧಾನ ಮಹಾಲೇಖಪಾಲರು (ಜಿ & ಎಸ್.ಎಸ್.ಎ) ಕರ್ನಾಟಕ, ಹೊಸ ಕಟ್ಟಡ, 'ಆಡಿಟ್ ಭವನ', ಅಂಚೆ ಪೆಟ್ಟಿಗೆ ಸಂಖ್ಯೆ: 5398, ಬೆಂಗಳೂರು-560001.