Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ನೀವು ಕರ್ನಾಟಕ ಸರ್ಕಾರಿ ಸೇವಾ (ಸದ್ವರ್ತನೆ) ನಿಯಮಾವಳಿ 1966 ರ (3)(1)(i) ಮತ್ತು (ii)ನೇ ನಿಬಂಧನೆಯನ್ನು ಉಲ್ಲಂಘಿಸಿ ದುರ್ನಡತೆ ಎಸಗಿದ್ದೀರಿ.”

ವಿಚಾರಣಾಧಿಕಾರಿಗಳು ಮೇಲೆ ಕ್ರಮ ಸಂಖ್ಯೆ(2) ರಲ್ಲಿ ಓದಲಾದ ವರದಿಯಲ್ಲಿ ಶ್ರೀ. ಅಯೂಬ್ ಖಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗಿಡ್ಡಪ್ಪನಹಳ್ಳಿ ಗ್ರಾಂ ಪಂಚಾಯಿತಿ, ಹೊಸಕೋಟೆ ತಾಲ್ಲೂಕು: ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರ ವಿರುದ್ಧದ ಆರೋಪವು ಸಾಬೀತಾಗಿದೆಯೆಂದು ನಿರ್ಣಯಿಸಿರುತ್ತಾರೆ. ಸದರಿಯವರ ವಿರುದ್ಧ ಸಾಬೀತಾಗಿರುವ ಆರೋಪಕ್ಕೆ ಅನುಗುಣವಾಗಿ “ಅವರ ಕಾಲಿಕ ವೇತನ ಶ್ರೇಣಿಯಲ್ಲಿ ವೇತನವನ್ನು ಎರಡು ಹಂತ ಶಾಶ್ವತವಾಗಿ ಕೆಳಗಿಳಿಸುವ” ದಂಡನೆ ವಿಧಿಸಲು ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

ಈ ಸಂಬಂಧ ಶ್ರೀ. ಅಯೂಬ್ ಖಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗಿಡ್ಡಪ್ಪನಹಳ್ಳಿ ಗ್ರಾಂ ಪಂಚಾಯಿತಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರಿಗೆ ನಿಯಮಾನುಸಾರ ಕ್ರಮಸಂಖ್ಯೆ (4) ರಲ್ಲಿ ಓದಲಾದ ಸರ್ಕಾರದ ಪತ್ರದಲ್ಲಿ ವಿಚಾರಣಾಧಿಕಾರಿಯವರ ವರದಿ ಮತ್ತು.. ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನ ಪ್ರತಿಯೊಂದಿಗೆ 2ನೇ ಕಾರಣ ಕೇಳುವ ನೋಟೀಸ್‌ನ್ನು ಜಾರಿಗೊಳಿಸಲಾಗಿತ್ತು. ಈ ನೋಟೀಸಿಗೆ ಅವರು ಮೇಲೆ ಕ್ರಮ ಸಂಖ್ಯೆ (5) ರಲ್ಲಿ ಓದಲಾದ ಮನವಿ ಮೂಲಕ ತಮ್ಮ ಲಿಖಿತ ಹೇಳಿಕೆ ಸಲ್ಲಿಸಿರುತ್ತಾರೆ.

ಆಪಾದಿತ ನೌಕರರು ಸರ್ಕಾರದ 2ನೇ ಕಾರಣ ಕೇಳುವ ನೋಟಿಸಿಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಕೆಳಕಂಡ ಪ್ರಮುಖ. ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ.

  • ನಾನು ದಿನಾಂಕ:21-08-2014 ರಿಂದ 28-01-2015 ರವರೆಗೆ, ಅಂದರೆ ಕೇವಲ 5 ತಿಂಗಳು ಮಾತ್ರ ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ.

  • ಶ್ರೀ ರಘುನಾಥ್ ಎಸ್.ಎಂ. ಬಿನ್ ಮುನಿರಾಜು, ಸಿದ್ದೇನಹಳ್ಳಿ ಗ್ರಾಮವಾಸಿ ಇವರು, ತಮ್ಮ ಊರು ಸಿದ್ದೇನಹಳ್ಳಿಯಲ್ಲಿರುವ ಸಾರ್ವಜನಿಕ ಕುಂಟೆಯ ದಕ್ಷಿಣ ಭಾಗಕ್ಕೆ ರಸ್ತೆಯು ಒತ್ತುವರಿಯಾಗಿದೆ ಎಂದು ದಿನಾಂಕ: 23-01-2015 ರಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಆಪಾದನೆಯ ಸಮರ್ಥನೆಯ ಸಂಬಂಧಪಟ್ಟ ಯಾವುದೇ ದಾಖಲೆ, ಸಾಕ್ಷ್ಯ ಪುರಾವೆಗಳಿಲ್ಲದೆ ದುರುದ್ದೇಶದಿಂದ ನನ್ನ ಮೇಲೆ ಸುಳ್ಳು ದೂರನ್ನು ನೀಡಿರುತ್ತಾರೆ..

  • ಆದರೆ, ಮಾನ್ಯ ಉಪಲೋಕಾಯುಕ್ತ-2 ರವರು ಈ ಬಗ್ಗೆ ತಮ್ಮ ಸಂಸ್ಥೆಯಿಂದ ತನಿಖಾಧಿಕಾರಿಯನ್ನು ನೇಮಿಸಿ ಸ್ಥಳ ಪರಿಶೀಲನೆ ನಡೆಸಿ ಸಿದ್ದೇನಹಳ್ಳಿಯಲ್ಲಿರುವ ಸಾರ್ವಜನಿಕ ಕುಂಟೆಯ ದಕ್ಷಿಣ ಭಾಗಕ್ಕಿರುವ ರಸ್ತೆಯು ಒತ್ತುವರಿಯಾಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ವರದಿಯನ್ನು ಪಡೆದು ಮುಂದಿನ ಕ್ರಮವಹಿಸಬಹುದಾಗಿತ್ತು. ಆದರೆ ದೂರುದಾರರ ಸಾಕ್ಷ್ಯರಹಿತ ಸುಳ್ಳು ಆಪಾದನೆಯ ಮೇಲೆ ನನ್ನ ವಿರುದ್ಧ ಶಿಸ್ತು ಕ್ರಮವಹಿಸಲು ಶಿಫಾರಸ್ಸು ಮಾಡುವ ವರದಿಯನ್ನು ದಿನಾಂಕ: 01.07.2016 ರಂದು ಸರ್ಕಾರಕ್ಕೆ ಕಳುಹಿಸಿರುತ್ತಾರೆ.

  • ಸರ್ಕಾರದ ಆದೇಶ ದಿನಾಂಕ: 12.08.2016 ರನ್ವಯ ನನ್ನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಶಿಸ್ತು ಪ್ರಾಧಿಕಾರದ ಪರವಾಗಿ ಮಾನ್ಯ ಅಪರ ನಿಬಂಧಕರು (ವಿಚಾರಣೆ-8) ಕರ್ನಾಟಕ ಲೋಕಾಯುಕ್ತ ರವರು ದಿನಾಂಕ: 27.02.2017 ರಂದು ಜಾರಿಗೊಳಿಸಿರುತ್ತಾರೆ. ಆದರೆ, ಈ ದೋಷಾರೋಪಣಾ ಪಟ್ಟಿಯಲ್ಲಿ ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಕುಂಟೆಯ ದಕ್ಷಿಣ ಭಾಗದ ರಸ್ತೆಯನ್ನು ಅಲ್ಲಿನ ನಿವಾಸಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಯಾವುದೇ ಕ್ರಮವಹಿಸದೇ ಕರ್ತವ್ಯಲೋಪ ಎಸಗಿರುತ್ತೇನೆ ಎಂದು ನನ್ನ ವಿರುದ್ಧ ಛಾರ್ಜ್ ಮಾಡಲಾಗಿರುತ್ತದೆ.

  • ದಿನಾಂಕ: 27.02.2017 ರ ದೋಷಾರೋಪಣಾ ಪಟ್ಟಿಯ ಅನುಬಂಧ-1 ಮತ್ತು 2 ರಲ್ಲಿ ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಕುಂಟೆಯ ದಕ್ಷಿಣ ಭಾಗಕ್ಕಿರುವ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ ಎಂದು ನನ್ನ ವಿರುದ್ಧ ತಪ್ಪು ದೋಷಾರೋಪಣೆಯನ್ನು ಮಾಡಲಾಗಿರುತ್ತದೆ. ದೂರುದಾರರ ಆಪಾದನೆ

2