Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

-2-

ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958, ಕರ್ನಾಟಕ ಸಿವಿಲ್ ಸೇವೆ (ಸಿಸಿಎ) ನಿಯಮಗಳು 1957, ಕರ್ನಾಟಕ ಸಿವಿಲ್ ಸೇವೆ (ನಡತೆ) ನಿಯಮಗಳು 1966 ರಡಿಯಲ್ಲಿನ ನಿಯಮಗಳು, ತಿದ್ದುಪಡಿಗಳು, ಆದೇಶಗಳು, ಅನುಮತಿ ಪ್ರಾಧಿಕಾರಿಗಳ ಸಂಬಂಧದ ಆದೇಶಗಳು ಹಾಗೂ ಆಗಿಂದಾಗ್ಗೆ ಹೊರಡಿಸುವ ಆದೇಶಗಳ ಪರಿಧಿಗೆ ಒಳಪಟ್ಟಂತೆ ಆನ್ ಲೈನ್ ತಂತ್ರಾಂಶ ಸೃಜಿಸಲಾಗಿದೆ ಹಾಗೂ ಅನುಷ್ಠಾನಗೊಳಿಸಲಾಗಿದೆ.

ಈ ಎಲ್ಲಾ ಸೌಲಭ್ಯಗಳನ್ನು ದಿನಾಂಕ:01/05/2019ರಿಂದ ಜಾರಿಗೆ ಬರುವಂತೆ ಆನ್ ಲೈನ್ ನಿರ್ವಹಿಸಿ ಇತ್ಯರ್ಥಪಡಿಸುವುದು ಕಡ್ಡಾಯವಾಗಿರುತ್ತದೆ. ತಂತ್ರಾಂಶದಲ್ಲಿ ಮಾಹಿತಿ ಅಪ್-ಲೋಡ್ ಮಾಡುವ / ಅನುಮತಿ ನೀಡುವ ಅಧಿಕಾರಿಗಳ ಡಿಜಿಟಲ್ ಸಹಿ ಅಳವಡಿಕೆಯಾಗುವವರೆಗೆ ಅಧಿಕಾರಿಗಳೇ ಸ್ವತಃ ಸಹಿ ಮಾಡಿ (manual) ಆನ್ ಲೈನ್ ಮೂಲಕ ಸಲ್ಲಿಸಲು ತಿಳಿಸಿದೆ. ಈ ಬಗ್ಗೆ ಪ್ರಸ್ತಾಪಿತ ಆನ್ ಲೈನ್ ಸೇವೆಗಳಿಗೆ ಸಂಬಂಧಿಸಿದಂತೆ ಕೈಪಿಡಿಯನ್ನು ಮಾರ್ಗಸೂಚಿಗಳನ್ನು ಹಾಗೂ ಆದೇಶಗಳನ್ನು ಇಲಾಖೆಯ ವೆಬ್ ಸೈಟ್ ವಿಳಾಸ http://www.sts.karnataka.gov.in ರಲ್ಲಿ ಪ್ರಕಟಿಸಲಾಗಿದೆ.

ಸದರಿ ಆನ್ ಲೈನ್ ಸೇವೆಗೆ ಭಾಗೀದಾರ ಇಲಾಖೆಗಳು ನಿಮ್ಮ ಇಲಾಖೆಯ ಲಾಗಿನ್ ಮೂಲಕ ಆನ್ ಲೈನ್ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಮೇಲ್ಕಂಡ ಸೇವೆಗಳನ್ನು ಇಲಾಖೆಯ ಅಧಿಕಾರಿ/ನೌಕರರ ವೃಂದದವರು ತಮ್ಮ ಹಂತದಲ್ಲಿ ಪಡೆಯಲು ಆನ್ ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿ ಕೋರಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಟಿ.ಡಿ. ನಾಗೇಂದ್ರ),

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ(ಆಡಳಿತ)

ಇವರಿಗೆ:-

  1. ಪ್ರಧಾನ ಮಹಾಲೇಖಪಾಲರು(ಎ ಮತ್ತು ಇ), ಪಾರ್ಕ್ ಹೌಸ್ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ:5329, ಕರ್ನಾಟಕ, ಬೆಂಗಳೂರು-1.

  2. ಮಾನ್ಯ ಲೋಕಾಯುಕ್ತರು/ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಕಛೇರಿ, ಅಂಬೇಡ್ಕರ್ ವೀಧಿ, ಬೆಂಗಳೂರು.

  3. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

  4. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ,

  5. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ,

  6. ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆ,

  7. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.

  8. ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.

  9. ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗಳು, ಪಾಸ್ ಪೋರ್ಟ್ ಕಛೇರಿ, ಕೋರಮಂಗಲ, ಬೆಂಗಳೂರು

  10. ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ/ಕಲಬುರ್ಗಿ.