Benchmarks
View scores and output across OCR models spanning many document categories.
Want to run these evals on your own documents?
Talk to Salesಕರ್ನಾಟಕ
ಸರ್ಕಾರ
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು.
ಸಂಖ್ಯೆ: ಎಡಿಎಂ2(4)ಸುತ್ತೋಲೆ-20/2018–19
ದಿನಾಂಕ:30-08-2018
ಪ್ರಸ್ತಾವನೆ
ವಿಷಯ: ಪರಿಸರ ಸ್ನೇಹಿ ಗಣಪತಿ ವಿಗ್ರಹ ಖರೀದಿಸುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಬಗ್ಗೆ
ಉಲ್ಲೇಖ:1. ಸರ್ಕಾರದ ಪತ್ರ ಸಂಖ್ಯೆ: ಇಡಿ 79 ಎಸ್‌ಟಿಬಿ 2018 ದಿನಾಂಕ:07.08.2018.
2. ಮಾನ್ಯ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣರವರ ಟಿಪ್ಪಣಿ ಸಂಖ್ಯೆ: /265/2018-19 ದಿನಾಂಕ:16.07.2018.
3. ಡಾ. ಕೆ.ಎಂ. ಜಯರಾಮಯ್ಯ, ಮಾಜಿ ಸದಸ್ಯರು, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರರವರ ಮನವಿ ದಿನಾಂಕ:13.07.2018.
*****
ಯಾವುದೇ ಸಾಮಾಜಿಕ ಬದಲಾವಣೆಯಾಗಲೀ ಚಿಕ್ಕ ವಯಸ್ಸಿನಲ್ಲೇ ಆಗಬೇಕು. ಮಕ್ಕಳು ಶಾಲೆಯಲ್ಲಿ ಕಲಿತ ಜ್ಞಾನ ಸಮಾಜದಲ್ಲಿ ವರ್ಗಾವಣೆಯಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಅವರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಬೇಕು. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಶಾಲಾ ಹಂತದಲ್ಲಿ ಉತ್ತಮವಾದ ಅಭ್ಯಾಸ / ಹವ್ಯಾಸಗಳನ್ನು ತಿಳಿಸುವ ಅಗತ್ಯತೆ ಇರುತ್ತದೆ.
ಗಣೇಶೋತ್ಸವ ಆಚರಣೆಗಾಗಿ ಮಕ್ಕಳು, ಹಾನಿಕಾರಕ ರಾಸಾಯನಿಕ ವಸ್ತುಗಳಿಂದ ಕೂಡಿದ ಬಣ್ಣ ಬಣ್ಣದ ವಿಗ್ರಹಗಳನ್ನು ಖರೀದಿಸಿ, ಪೂಜಿಸಿದ ನಂತರ ವಿಸರ್ಜನೆ ಮಾಡುವಾಗ ಕೆರೆಯಲ್ಲಿನ ಜಲಚರ ಜೀವಿಗಳಿಗೆ ಹಾನಿಯಾಗುವುದರೊಟ್ಟಿಗೆ ಮಾನವರಲ್ಲಿ ವಿವಿಧ ರೀತಿಯ ರೋಗಗಳಿಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸುವಂತೆ ಅರಿವು ಮೂಡಿಸಿ ಕೆರೆಗಳ ಸಂರಕ್ಷಣೆಗೆ ಸಹಕಾರ ನೀಡುವಂತೆ ಉಲ್ಲೇಖ(3)ರ ಪತ್ರದಲ್ಲಿ ಮಾನ್ಯ ಸಚಿವರನ್ನು ಕೋರಿರುತ್ತಾರೆ.
ಉಲ್ಲೇಖ(3)ರಲ್ಲಿನ ಮನವಿ ಪತ್ರದ ಅಂಶಗಳನ್ನು ಪರಿಶೀಲಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರುಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಉಲ್ಲೇಖ(1)ರ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಲಾಗಿದೆ.
-ಪು.ತಿ.ನೋ.