Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

4

ಗಳ ಬಗ್ಗೆ ಸಂಬಂಧಿತ ಅಭ್ಯರ್ಥಿಗಳಿಗೆ ತಕ್ಷಣ ಆದೇಶವನ್ನು ಜಾರಿ ಮಾಡುವುದು. ತಿರಸ್ಕೃತ ಅಭ್ಯರ್ಥಿಯನ್ನು ಬಿಡುಗಡೆಗೊಳಿಸಿ ಇಲಾಖೆಗೆ ವರದಿ ಮಾಡುವುದು.

14. ಕೇಂದ್ರೀಕೃತ ದಾಖಲಾತಿ ಘಟಕದಿಂದ ಅರ್ಜಿ ಆಹ್ವಾನಿಸುವ ಮಾಹೆಯಲ್ಲಿ, ಆಡಳಿತ ಮಂಡಳಿಗಳು ಮೇಲಿನ ಸೂಚನೆಗಳನ್ನು ಅಳವಡಿಸಿಕೊಂಡು ಸಿದ್ಧಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರವೇಶಾವಕಾಶದ ಅರ್ಜಿಯನ್ನು ಕರೆಯಬಹುದಾಗಿರುತ್ತದೆ. ಎರಡನೆಯ ಸುತ್ತಿನ ಕೇಂದ್ರೀಕೃತ ದಾಖಲಾತಿ ಘಟಕದ ದಾಖಲಾತಿಗಳು ಪೂರ್ಣಗೊಳ್ಳುವ ವೇಳೆಗೆ ಆಡಳಿತ ಮಂಡಳಿಗಳೂ, ತಮ್ಮ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅನುಮೋದನೆಗಾಗಿ ವಿದ್ಯಾರ್ಥಿಗಳ ಮೊದಲ ಪಟ್ಟಿಯನ್ನು ಜಿಲ್ಲೆಯ ಡಯಟ್ ಪ್ರಾಂಶುಪಾಲರುಗಳಿಗೆ ಸಲ್ಲಿಸಿಕೊಳ್ಳಬೇಕು.

15. ಆಡಳಿತ ಮಂಡಳಿಗಳ ಉಳಿಕೆ ಸೀಟುಗಳಿದ್ದಲ್ಲಿ ಹೆಚ್ಚುವರಿ 10 ರಿಂದ 15 ದಿನಗಳ ಕಾಲಾವಕಾಶದಲ್ಲಿ 2ನೇ ಪಟ್ಟಿಯಲ್ಲಿ ಅನುಮೋದನೆಗೆ ಉಳಿಕೆ ಸೀಟುಗಳ ವಿವರಗಳನ್ನು ಸಲ್ಲಿಸಲು ಕ್ರಮ ಕೈಗೊಳ್ಳತಕ್ಕದ್ದು. ಒಟ್ಟಾರೆ ತರಗತಿ ಪ್ರಾರಂಭವಾದ 2 ವಾರದೊಳಗೆ ಎರಡೂ ಪಟ್ಟಿಗಳನ್ನು ಡಯಟ್ ಪ್ರಾಂಶುಪಾಲರಿಗೆ ಸಲ್ಲಿಸಿಕೊಂಡಿರಬೇಕು. ಪಟ್ಟಿಗಳೊಂದಿಗೆ ಅಭ್ಯರ್ಥಿಗಳ ಅಗತ್ಯ ದಾಖಲೆಗಳನ್ನು ದ್ವಿಪ್ರತಿಯಲ್ಲಿ ತಯಾರಿಸಿ ಒಂದು ಪ್ರತಿಯನ್ನು ಅನುಮೋದನಾ ಪ್ರಸ್ತಾವನೆಯೊಂದಿಗೆ ಡಯಟ್ ಪ್ರಾಂಶುಪಾಲರಿಗೆ ಸಲ್ಲಿಸುವುದು. ಮತ್ತೊಂದು ಪ್ರತಿಯನ್ನು ದಾಖಲೆಯಾಗಿ ಸಂಸ್ಥೆಯಲ್ಲಿಟ್ಟುಕೊಂಡು ಇಲಾಖೆ ಬಯಸಿದಾಗ ಪರಿಶೀಲನೆಗೆ ಒಪ್ಪಿಸುವುದು.

16. ಸಲ್ಲಿಕೆಯಾದ ಪಟ್ಟಿಗಳನ್ನು ಯಾವುದೇ ನಿಯಮಗಳ ಉಲ್ಲಂಘನೆ ಬಗ್ಗೆ ಪೂರ್ವಭಾವಿ ಪರಿಶೀಲನೆ ನಡೆಸಿ, ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ ಮರು ಟಪಾಲಿನಲ್ಲಿ ಡಯಟ್ ಪ್ರಾಂಶುಪಾಲರು ಅಂತಹ ದಾಖಲಾತಿಯನ್ನು ತಿರಸ್ಕರಿಸಿ ಆದೇಶ ನೀಡುತ್ತಾರೆ. ಆ ತಿರಸ್ಕೃತ ದಾಖಲಾತಿಯ ವಿದ್ಯಾರ್ಥಿಯನ್ನು ಸಂಸ್ಥೆಯಿಂದ ಬಿಡುಗಡೆ ಮಾಡಿ ಇಲಾಖೆಗೆ ವರದಿ ಮಾಡತಕ್ಕದ್ದು. ಸರ್ಕಾರಿ ಕೋಟಾದ ವಿದ್ಯಾರ್ಥಿಗಳ ಹಂಚಿಕೆಯ ಪ್ರಕ್ರಿಯೆಯು ಅಂತಿಮವಾಗಿ ಮುಗಿದನಂತರ ಕೇಂದ್ರೀಕೃತ ದಾಖಲಾತಿ ಘಟಕದಿಂದ ಅಧಿಕೃತವಾಗಿ ಸುತ್ತೋಲೆಯನ್ನು ಹೊರಡಿಸುವ ಮುಂಚೆ ಆಡಳಿತ ಮಂಡಳಿಯು ಖಾಲಿ ಉಳಿದ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡತಕ್ಕದ್ದಲ್ಲ.

17. ಉಲ್ಲೇಖ(4) ರಂತೆ ದಾಖಲಾತಿಗೆ ಪ್ರಕ್ರಿಯೆ ನಿಗದಿಗೊಳಿಸಿದ ದಿನಾಂಕದ ನಂತರ ಸಲ್ಲಿಕೆಯಾಗುವ ಯಾವುದೇ ಪ್ರಸ್ತಾವನೆಗಳನ್ನು ಡಯಟ್ ಹಂತದಲ್ಲಿಯೇ ತಿರಸ್ಕರಿಸತಕ್ಕದು.

18. ಮಾನ್ಯತೆ ಹೊಂದಿದ ಸಂಸ್ಥೆಗಳು ತಮ್ಮ ಯಾವುದಾದರೂ ಕುಂದು ಕೊರತೆ ಬಗ್ಗೆ ಇಲಾಖಾ ಮುಖ್ಯಸ್ಥರ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿಕೊಳ್ಳಲು ತಿಳಿಸಿದೆ.

19. ಸಂಸ್ಥೆಗಳು ಅನಧಿಕೃತ ದಾಖಲಾತಿಗಳನ್ನು, ಹೆಚ್ಚುವರಿ ದಾಖಲಾತಿಗಳನ್ನು ಮಾಡಿಕೊಂಡಲ್ಲಿ ಅಂತಹ ಸಂಸ್ಥೆಗಳ ವಿರುದ್ದ ಮತ್ತು ಅನಧಿಕೃತವಾಗಿ ಎನ್.ಸಿ.ಟಿ.ಇ ಮಾನ್ಯತೆ ಪಡೆಯದೇ ಡಿ.ಇಡಿ ವಿಭಾಗ ತೆರೆದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕರ್ನಾಟಕ ಮಾನ್ಯತೆ ಪಡೆಯದ ಮತ್ತು ಸಂಯೋಜಿತವಾಗಿಲ್ಲದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ನಿಷೇಧ ಅಧಿನಿಯಮ 92 ರಡಿ ಪ್ರಸ್ತಾಪಿತ ಕ್ರಮಗಳನ್ನು ಕೋರಿ ವಿಳಂಬವಿಲ್ಲದಂತೆ ಸೂಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಡಯಟ್ ಪ್ರಾಂಶುಪಾಲರು ಉಲ್ಲೇಖತ ಸರ್ಕಾರಿ ಆದೇಶದಂತೆ ಸಕ್ಷಮ ಪ್ರಾಧಿಕಾರಿಗಳಾಗಿದ್ದು ಅದರಂತೆ ಕ್ರಮ ಜರುಗಿಸಲು ತಿಳಿಸಿದೆ. ಡಯಟ್ ಪ್ರಾಂಶುಪಾಲರು ಈ ಬಗ್ಗೆ ವಿವರಗಳನ್ನು ಈ ಕಛೇರಿಗೆ ಒದಗಿಸಲು ತಿಳಿಸಿದೆ.

20. ಸಂಸ್ಥೆಗಳು ಸರ್ಕಾರವು ನಿಗದಿ ಪಡಿಸಿರುವ ಶುಲ್ಕಗಳನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯತಕ್ಕದ್ದು, ಹೆಚ್ಚುವರಿ ಶುಲ್ಕ ವಸೂಲಾತಿ ನಿಯಮ ಬಾಹಿರವಾಗಿದ್ದು, ಇಂತಹ ಸಂಸ್ಥೆಗಳ ಬಗ್ಗೆ ಡಯಟ್ ಪ್ರಾಂಶುಪಾಲರು ನಿಯಮಾನುಸಾರ ಸೂಕ್ತಕ್ರಮವನ್ನು ಕೈಗೊಳ್ಳಲು ತಿಳಿಸಿದೆ.

C:\Documents and Settings\user\Desktop\2014-15 DEd Time Table1.docx