Benchmarks
View scores and output across OCR models spanning many document categories.
Want to run these evals on your own documents?
Talk to Sales Page 1 of 1
-2-
ಷರತ್ತುಗಳು:
- ಸದರಿ ಸಿಬ್ಬಂದಿಗಳು, ಪರೀಕ್ಷೆಗೆ ಸಂಬಂಧಿಸಿದಂತೆ ಅಧ್ಯಯನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕೈಗೊಳ್ಳತಕ್ಕದ್ದು ಸಿಬ್ಬಂದಿಗಳು, ಸದರಿ ಪರೀಕ್ಷೆಯ ಅಧ್ಯಯನದ ನಿಮಿತ್ತ ಸರ್ಕಾರ/ಇಲಾಖೆಗೆ ಯಾವುದೇ ಆರ್ಥಿಕ ಹೊರೆ ಉಂಟಾಗತಕ್ಕದ್ದಲ್ಲ.
- ಸದರಿ ಸಿಬ್ಬಂದಿಗಳು/ಉಪನ್ಯಾಸಕರುಗಳು, ವಿದ್ಯಾರ್ಥಿಗಳ ಪಾಠ-ಪ್ರವಚನಗಳಿಗೆ ತೊಂದರೆ ಉಂಟಾಗದಂತೆ ಬಿಡುವಿನ ವೇಳೆಯಲ್ಲಿ, ಪರೀಕ್ಷೆಯ ಅಧ್ಯಯನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳತಕ್ಕದ್ದು.
- ಸದರಿ ಸಿಬ್ಬಂದಿಗಳು ಸದರಿ ಪರೀಕ್ಷೆಯ ಅಧ್ಯಯನದ ನಿಮಿತ್ತ ವರ್ಗಾವಣೆ ಕೋರುವಂತಿಲ್ಲ ಅಥವಾ ಅವರ ಪರೀಕ್ಷೆಯ ಅಧ್ಯಯನ ಸರ್ಕಾರದ/ಇಲಾಖೆಯ ವರ್ಗಾವಣೆಗೆ ಅಡ್ಡಿ ಬರುವಂತಿಲ್ಲ.
- ಸದರಿ ಸಿಬ್ಬಂದಿಗಳು/ಉಪನ್ಯಾಸಕರುಗಳು ಬೇರೆ ಯಾವುದೇ ಇಲಾಖೆಯ ಹುದ್ದೆಗೆ ಆಯ್ಕೆಯಾದಲ್ಲಿ, ಈಗ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಹುದ್ದೆಯಿಂದ ಬಿಡುಗಡೆ ಹೊಂದುವ ಮೊದಲು ಇಲಾಖೆಯ ಅನುಮತಿ ಪಡೆಯತಕ್ಕದ್ದು.
ಜಂಟಿ ನಿರ್ದೇಶಕರು(ಆಡಳಿತ),
ಪದವಿ ಪೂರ್ವ ಶಿಕ್ಷಣ ಇಲಾಖೆ.
ಸಂಬಂಧಿಸಿದ ಉಪನ್ಯಾಸಕರುಗಳಿಗೆ/ಪ್ರಥಮ/ದ್ವಿತೀಯ ದರ್ಜೆ ಸಹಾಯಕರಿಗೆ
ಪ್ರತಿಗಳು:
- ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರಿಗೆ.
- ಸಂಬಂಧಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ-ಮಾಹಿತಿಗಾಗಿ
- ಕಛೇರಿ ಪ್ರತಿ.