Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

495

---3---

ಗೌರವಾನ್ವಿತ ಲೋಕಾಯುಕ್ತರವರ ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಿದ
ಸರ್ಕಾರ ಸದರಿ ಪ್ರಕರಣದಲ್ಲಿ ಸದರಿ ಜಂಟಿ ಕೃಷಿ ನಿರ್ದೇಶಕರು(ನಿವೃತ್ತ)ರವರ ವಿರುದ್ಧ ಕರ್ನಾಟಕ
ನಾಗರೀಕ ಸೇವಾ ನಿಯಮ 214(2) (b)(i)ರಡಿ ಮತ್ತು ಸದರಿ ಕೃಷಿ ಅಧಿಕಾರಿ ವಿರುದ್ಧ ಕರ್ನಾಟಕ
ನಾಗರೀಕ ಸೇವಾ (ಸಿ.ಸಿ.ಎ) ನಿಯಮಾವಳಿ 1957ರ ನಿಯಮ 11ರಡಿ ವಿಚಾರಣಾ ಕ್ರಮವನ್ನು
ಆಯೋಜಿಸಲು ಪ್ರಕರಣವನ್ನು ಅದೇ ನಿಯಮಾವಳಿ ನಿಯಮ 14(ಎ)ರಡಿಯಲ್ಲಿ ಮಾನ್ಯ
ಲೋಕಾಯುಕ್ತರಿಗೆ ವಹಿಸಲು ನಿರ್ಧರಿಸಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಕೃತೋಇ 45 ಕೃಪವಿ 2009
ಬೆಂಗಳೂರು, ದಿನಾಂಕ: 17ನೇ ಏಪ್ರಿಲ್ 2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಶ್ರೀ ಎನ್. ವಿ. ಚಂದ್ರಶೇಖರ್,
ಹಿಂದಿನ ಜಂಟಿ ಕೃಷಿ ನಿರ್ದೇಶಕರು ರಾಯಚೂರು (ನಿವೃತ್ತ) ಇವರ ವಿರುದ್ಧ ಕರ್ನಾಟಕ
ನಾಗರೀಕ ಸೇವಾ ನಿಯಮಾವಳಿ ನಿಯಮ 214(2) (b)(i)ರಡಿ ಹಾಗೂ ಶ್ರೀ ಶಿವಶೇಖರ್
ಪಾಟೀಲ್ ತಂದೆ ಶ್ರೀ ವಿರೂಪಾಕ್ಷಪ್ಪ, ಹಿಂದಿನ ಕೃಷಿ ಅಧಿಕಾರಿ, ಜಂಟಿ ಕೃಷಿ ನಿರ್ದೇಶಕರ
ಕಚೇರಿ, ರಾಯಚೂರು (ಹಾಲಿ ಕೃಷಿ ಅಧಿಕಾರಿ, ಬೀಜ ಪರೀಕ್ಷಾ ಪ್ರಯೋಗಾಲಯ ವಡ್ಡರಹಟ್ಟಿ,
ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ) ಇವರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ
(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ಪ್ರಕಾರ
ಇಲಾಖಾ ವಿಚಾರಣೆ ಕ್ರಮವನ್ನು ಆಯೋಜಿಸಲು ಪ್ರಕರಣವನ್ನು ಅದೇ ನಿಯಮಾವಳಿ
ನಿಯಮ 14(ಎ)ರನ್ವಯ ಮಾನ್ಯ ಲೋಕಾಯುಕ್ತರವರಿಗೆ ವಹಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

Majpat
(ಮಂಜುನಾಥ ಪಾಟೀ)
ಸರ್ಕಾರದ ಅಧೀನ ಕಾರ್ಯದರ್ಶಿ,

ಕೃಷಿ ಇಲಾಖೆ.

ಇವರಿಗೆ:-

  1. ಮಹಾಲೇಖಪಾಲರು, (ಲೆಕ್ಕಪತ್ರ ಮತ್ತು ಲೆಕ್ಕ ತಪಾಸಣೆ ಜಿಇ-05) ಕರ್ನಾಟಕ, ಬೆಂಗಳೂರು.
  2. ಗೌರವಾನ್ವಿತ ಕರ್ನಾಟಕ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಚೇರಿ,
    ಬೆಂಗಳೂರು.

---4---