Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1
Emblem of the Government of India and the State of Karnataka
Emblem of the Government of India and the State of Karnataka

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉತ್ತರ ಕನ್ನಡ, ಕಾರವಾರ – 581 301
OFFICE OF THE DEPUTY COMMISSIONER, UTTARA KANNADA DISTRICT, KARWAR, -581 301
ದೂರವಾಣಿ : (08382) 226406/226471/222071, ಫ್ಯಾಕ್ಸ್ : 226603/222072 Email: dckarwar@gmail.com

ಸಂ. ಡಿಸಿಬಿ/ಎಂಎಜಿ/ಇತರೆ/ವಿವ-401/2019-20

24-03-2020

Seal of the District Magistrate, Uttara Kannada
Seal of the District Magistrate, Uttara Kannada

ವಿಷಯ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ
ಹರಡದಂತೆ ಸೂಕ್ತ ಮುಂಜಾಗೃತ ಕ್ರಮವಾಗಿ ವಿಧಿಸಿದ ನಿಷೇಧಾಜ್ಞೆಯನ್ನು ಭಟ್ಕಳ
ತಾಲೂಕಿನ ಪುರಸಭೆ ವ್ಯಾಪ್ತಿಗೆ ಸೀಮಿತವಾಗಿ ಮಾರ್ಪಡಿಸುವ ಕುರಿತು.

ಜಿಲ್ಲಾ ದಂಡಾಧಿಕಾರಿ, ಉ.ಕ. ಉಲ್ಲೇಖ: 1. ಸಾಂಕ್ರಾಮಿಕ ರೋಗ ಕಾಯ್ದೆ 1897

2. ಕರ್ನಾಟಕ ಸರಕಾರದ ಅಧಿಸೂಚನೆ ಸಂಖ್ಯೆ ಹೆಚ್ ಎಫ್ ಡಬ್ಲ್ಯೂ/ 54/ ಸಿಜಿಎಂ/2020

ದಿನಾಂಕ: 11-3-2020.

3. ಈ ಕಚೇರಿ ಸಮ ಕ್ರಮಾಂಕದ ಆದೇಶ ದಿನಾಂಕ: 23-03-2020.

4. ಸಿ.ಆರ್.ಪಿ.ಸಿ. ಸೆಕ್ಷನ್ 144 ರನ್ವಯ

*****

ಪ್ರಸ್ತಾವನ :

ಭಟ್ಕಳ ಉಪ-ವಿಭಾಗದ ಹೆಚ್ಚಿನ ನಾಗರೀಕರು ವಿದೇಶದಲ್ಲಿ ಸೇವೆಸಲ್ಲಿಸುತ್ತಿದ್ದು, ಅದರಲ್ಲಿ ಕೆಲವರು ಸ್ವದೇಶಕ್ಕೆ ಮರಳುತ್ತಿರುವುದನ್ನು ಕಂಡು ಮುಂಜಾಗೃತ ಕ್ರಮವಾಗಿ ಭಟ್ಕಳ ವಿಭಾಗಕ್ಕೆ ಸೀಮಿತವಾಗಿ ಉಲ್ಲೇಖ(3) ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಈಗ ಇಂದು ಭಟ್ಕಳ ನಗರ ವ್ಯಾಪ್ತಿಯ ಇಬ್ಬರು ನಿವಾಸಿಗರಲ್ಲಿ ಕೋವಿಡ್-19 ವೈರಾಣುಗಳಿಂದ ಹರಡುವ ಸೋಂಕು ಧೃಡಪಟ್ಟಿರುವುದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಭಟ್ಕಳ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿ ಒಳಗೊಂಡ ಸಂಪೂರ್ಣ ಭಟ್ಕಳ ನಗರಕ್ಕೆ ಸೀಮಿತವಾಗಿ ಈಗಾಗಲೇ ಉಲ್ಲೇಖ(3)ರನ್ವಯ ಹೊರಡಿಸಿದ ನಿಷೇಧಾಜ್ಞೆಯನ್ನು ಮಾರ್ಪಡಿಸಿ ಇನ್ನಷ್ಟು ಹೆಚ್ಚು ಬಿಗಿಗೊಳಿಸುವುದು ಸೂಕ್ತವೆಂದು ಮನಗಂಡು ಈ ಕೆಳಗಿನಂತೆ ಆದೇಶ ಹೊರಡಿಸಿದ-

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಂದ ಮತ್ತು ದಂಡ ಪ್ರಕ್ರಿಯಾ ಸಂಹಿತೆ ಕಲಂ 144 ರಡಿ ನನ್ನಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಡಾ. ಹರೀಶ್ ಕುಮಾರ್ ಕೆ. ಭಾ.ಆ.ಸೇ, ಜಿಲ್ಲಾ ದಂಡಾಧಿಕಾರಿ ಉತ್ತರ ಕನ್ನಡ ಜಿಲ್ಲೆ ಆದ ನಾನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಒಳಗೊಂಡ ಸಂಪೂರ್ಣ ಭಟ್ಕಳ ನಗರಕ್ಕೆ ಸೀಮಿತವಾಗಿ ಈ ಕಚೇರಿಯ ಆದೇಶ ಸಂ. ಡಿಸಿಬಿ/ಎಂಎಜಿ/ಇತರೆ/ವಿವ-401/2019-20 ದಿನಾಂಕ:23-3-2020 ರನ್ವಯ ಜಾರಿ ಮಾಡಿದ ನಿಷೇಧಾಜ್ಞೆಗೆ ಈ ಕೆಳಗಿನಂತೆ ಮಾರ್ಪಾಡು ಮಾಡಿ ಆದೇಶಿಸಿದೆ.

  1. ಭಟ್ಕಳ ಮತ್ತು ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿನ್ನೊಳಗೊಂಡ ಸಂಪೂರ್ಣ ಭಟ್ಕಳ ನಗರಕ್ಕೆ ಯಾವುದೇ ವ್ಯಕ್ತಿಯ ಆಗಮನ ಮತ್ತು ನಿರ್ಗಮನ ನಿಷೇಧಿಸಲಾಗಿದೆ.
  2. ಮನೆಮನೆಗೆ ಆಗಮಿಸುವ ಆರೋಗ್ಯ ಕಾರ್ಯಕರ್ತರಿಗೆ ಪ್ರತಿಯೊಬ್ಬರು ಸೂಕ್ತ ಸಹಕಾರ ನೀಡತಕ್ಕದ್ದಾಗಿರುತ್ತದೆ.
  3. ತುರ್ತು ಕಾರಣಗಳು ಇಲ್ಲದೇ ಯಾವುದೇ ವ್ಯಕ್ತಿಯು ತಮ್ಮ ಮನೆಯಿಂದ ಹೊರ ಬರುವುದನ್ನು ನಿಷೇಧಿಸಲಾಗಿದೆ.
  4. ಜೀವನಾವಶ್ಯಕ ವಸ್ತುಗಳನ್ನು ಅಥವಾ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಮನೆಯಿಂದ ಹೊರಬರುವುದು ಅತ್ಯಗತ್ಯವಾಗಿದ್ದಲ್ಲಿ ಕಡ್ಡಾಯವಾಗಿ ಭಟ್ಕಳ ತಾಲೂಕು ಆಡಳಿತದ ಪೂರ್ವಾನುಮತಿ ಪಡೆದೇ ಹೊರಬರಬೇಕು.
  5. ಜೀವನಾವಶ್ಯಕ ವಸ್ತುಗಳ ಖರೀದಿ, ದಾಸ್ತಾನು ಅಥವಾ ಹಂಚಿಕೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ತೆಗೆದುಕೊಳ್ಳುವ ಯಾವತ್ತೂ ನಿರ್ಧಾರಗಳನ್ನು ಪಾಲಿಸಲು ಸಾರ್ವಜನಿಕರು ಬದ್ಧರಾಗಿರುತ್ತಾರೆ.

Scanned with CamScanner