Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

12

ಸಿದ್ಧಾಂತೋಪದೇಶವು.

ಸಚ್ಚಿದಾನಂದಾತ್ಮಕವಾದ ಲಕ್ಷ್ಮೀಬ್ರಹ್ಮವಾಯು- ಗರುಡಶೇಷರುದ್ರಾದಿಗಳಿಂದ ಶಿರಸಾ ವಂದಿತವಾದ ಧ್ವಜವಜ್ರಾಂಕುಶಾದಿಚಿಹ್ನೆಗಳಿಂದ ತುಂಬಿದ ಪಾದಕಮಲಗಳನ್ನು ವಂದಿಸಿದರು.

ಪರಾಶರಪುತ್ರರಾದ ವೇದವ್ಯಾಸದೇವರು ಉತ್ತಮಗುಣಗಳಿಂದ ತುಂಬಿ ಭಕ್ತತಿಶಯದಿಂದ ನಮಸ್ಕಾರವನ್ನು ಮಾಡುವ ಶ್ರೀಮದಾಚಾರ್ಯರನ್ನು ನೋಡಿ ತನ್ನ ಕೋಮಲಗಳಾದ ಕರಗಳಿಂದ ಎಬ್ಬಿಸಿ ಸ್ನೇಹಪೂರ್ಣವಾದ ಮನಸ್ಸಿನಿಂದ ಪೂರ್ಣಪ್ರಜ್ಞರನ್ನು ಆಲಿಂಗಿಸಿದರು. ಜಗಜ್ಜನ್ಮಾದಿಕಾರಣರಾದ ಈ ವ್ಯಾಸದೇವರ ಸಮಗ್ರವಾದ ಲಾಲನೆಯನ್ನು ಪುತ್ರರಾದ ಶುಕಾಚಾರ್ಯರು ಹೊಂದಲಿಲ್ಲ. ಅಂತಹ ಲಾಲನೆಯನ್ನು ಹೊಂದಿದ ಇವರೇ ಧನ್ಯರು, ಎಂದು ಭಾವಿಸಿ ವೇದವ್ಯಾಸದೇವರ ಶಿಷ್ಯರಾದ ಅತಏವ ಚತುರರಾದ ಋಷಿಗಳು ಅನುರೂಪವಾದ ಆಸನವನ್ನು ಕೊಟ್ಟರು.

ಸತ್ಯವತೀಪುತ್ರರಾದ ವೇದವ್ಯಾಸದೇವರು ಪೂರ್ಣಪ್ರಜ್ಞರಿಗೆ 'ಕುಳಿತುಕೊಳ್ಳಿ' ಎಂದು ಹೇಳಿ ತಾನು ಆಸನದಲ್ಲಿ ಕುಳಿತುಕೊಳ್ಳಲು ಶ್ರೀಮದಾಚಾರ್ಯರು ಋಷಿಗಳನ್ನು ತನ್ನ ಮಂದಹಾಸ ಅವಲೋಕನಾದಿಗಳಿಂದ ಗೌರವಿಸಿ ಕೂತರು. ಸಮೀಪವರ್ತಿಗಳಾದ ಋಷಿಗಳು ಶ್ರೇಷ್ಠರಾದ ವ್ಯಾಸದೇವರಿಂದ ಪೂರ್ಣಪ್ರಜ್ಞರನ್ನು ಮುಖ್ಯಪ್ರಾಣದೇವರ ಅವತಾರರೆಂದು ತಿಳಿದು ವಿಧಿಯುಕ್ತವಾಗಿ ಮಾನನಾವನ್ನು ಮಾಡಿ ಸರ್ವಜ್ಞರಾದ ಈ ಗುರುಶಿಷ್ಯರ ಶ್ರುತಿಗೆ ಸುಖವನ್ನು ಕೊಡುವ ಸಂಭಾಷಣೆಯನ್ನು ಕೇಳಿ ಉತ್ತಮವಾದ ಸಂತೋಷವನ್ನು ಹೊಂದಿದರು.

ಬುದ್ಧಿಪ್ರತಿಭಾದಿಗುಣಗಳಿಂದ ಋಷಿಗಳಿಗೆ ವಿಸ್ಮಯವನ್ನು ತಂದುಕೊಟ್ಟಪೂರ್ಣಪ್ರಜ್ಞರು ಏಕಾಂತದಲ್ಲಿ ವೇದನಾಯಕರಾದ ವೇದವ್ಯಾಸದೇವರನ್ನು ಉಪಸತ್ತಿಮಾಡಿ ಇತಿಹಾಸ, ಮನೋಹರಗಳಾದ ಪುರಾಣಗಳು, ನಿರ್ದುಷ್ಟವಾದ ಪಂಚರಾತ್ರ ಇವುಗಳ ನಿಜವಾದ ತಾತ್ಪರ್ಯದಿಂದ ಕೂಡಿದ ವೇದಸಮುದಾಯಗಳಾದ ಪರಮಾರ್ಥವನ್ನು ಅಪರಿಮಿತಗಳಾದ ಸಾರ್ವಜ್ಞಾದಿಗುಣಗಳುಳ್ಳ ಶ್ರೀ ವೇದವ್ಯಾಸ ದೇವರಿಂದ ಕೇಳಿದರು. ಅನಂತರದಲ್ಲಿ ವೇದವ್ಯಾಸದೇವರಿಂದ ಕೂಡಿಕೊಂಡು ಇನ್ನೊಂದು ಆಶ್ರಮದಲ್ಲಿ ಪ್ರಕಾಶಮಾನರಾಗಿರುವ ಧೂಮರಹಿತವಾದ ಬೆಂಕಿಯಂತಿರುವ ವಲ್ಕಲಾ ಮೌಂಜಿ, ಮೇಖಲಾ, ಜಟಾದಿಗಳಿಂದ ಕೂಡಿದ ಸ್ವರೂಪಭೂತವಾದ ಜ್ಞಾನಾನಂದಾದಿಗಳಿರುವ ನಾರಾಯಣದೇವರನ್ನು ನೋಡಿ, ಸರ್ವರಿಗೂ ಆಶ್ರಯಭೂತನಾದ ಬ್ರಹ್ಮನ ಕೈಯಿಂದ ವೇದವನ್ನು ಹಯಗ್ರೀವಾಸುರನು ಅಪಹರಿಸಲು ಬ್ರಹ್ಮದೇವರ ಪ್ರಾರ್ಥನಾ- ನುಸಾರವಾಗಿ ಮತ್ಸ್ಯರೂಪವನ್ನು ಸ್ವೀಕರಿಸಿದ, ಆದ್ಯರಾದ ಚತುರ್ಮುಖರಿಗೆ ವೇದಬೋಧನಾರ್ಥವಾಗಿ ಹಯಗ್ರೀವರೂಪವನ್ನು ತಾಳಿದ, ದೇವದೈತ್ಯರು ಒಂದಾಗಿ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು ಉದ್ಯುಕ್ತರಾದಾಗ ಮಂದರಪರ್ವತವು ಮುಳುಗಲು ತದುದ್ಧಾರಾರ್ಥವಾಗಿ ಕೂರ್ಮರೂಪವನ್ನು ಸ್ವೀಕರಿಸಿದ, ಹಿರಣ್ಯಾಕ್ಷನಿಂದ ಬಾಧೆ ಹೊಂದಿದ ಭೂಮಿಯ ಉದ್ಧಾರಣಾರ್ಥವಾಗಿ ವರಾಹರೂಪವನ್ನು ತಾಳಿದ, ಭಕ್ತನಾದ ಕುಮಾರಪ್ರಹ್ಲಾದನನ್ನು ಪಿತನಾದ ಹಿರಣ್ಯಕಶಿಪುವು ಕೊಲ್ಲಲು ಉದ್ಯುಕ್ತನಾದಾಗ ನೃಹರಿರೂಪವನ್ನು ಸ್ವೀಕರಿಸಿ ಅವನನ್ನು ಕೊಂದು ಭಕ್ತಪ್ರಹ್ಲಾದನನ್ನು ರಕ್ಷಿಸಿದ, ಹಾಗೆಯೇ ಬಲಿಯಿಂದ ಸ್ವರ್ಗವು ಅಪಹೃತವಾದಾಗ ವಾಮನ ರೂಪವನ್ನು ತಾಳಿ ಇಂದ್ರನಿಗೆ ರಾಜ್ಯವನ್ನು ಕೊಟ್ಟಿರುವ, ಭ್ರಗುಕುಲದಲ್ಲಿ ಪರಶುರಾಮರೂಪದಿಂದ ದುಷ್ಟರಾಜವೃಂದವನ್ನು ಸದೆಬಡಿದ, ಪುತ್ರನಿಗೆ ಪಿತೃವಾಕ್ಯ ಪರಿಪಾಲನೆಯು ಧರ್ಮವೆಂದು ಬೋಧಿಸುವ ಬಗ್ಗೆ ಪರಂಪರಾಪ್ರಾಪ್ತರಾಜ್ಯವನ್ನು ಬಿಟ್ಟು ವನವನ್ನು ತೆರಳಿದ ಶ್ರೀರಾಮನನ್ನು ಶುಕ್ಲಕೇಶಾವೇಶದಿಂದ ಕೂಡಿ ಕೃಷ್ಣಾಗ್ರಜನಾಗಿ ಜನಿಸಿದ ಬಲರಾಮನನ್ನೂ, ದೃಪಕ್ಷತ್ರಿಯರಿಂದ ಆಕ್ರಾಂತಳಾದ ಭೂಮಿಯ ಭಾರಹರಣಾರ್ಥವಾಗಿ ದೇವಕೀಸುತನಾಗಿ ಜನಿಸಿದ ಕೃಷ್ಣನನ್ನೂ, ಇತರಾದೇವಿಯ ಪುತ್ರನಾಗಿ ಮಹಿದಾಸ ನಾಮಕನಾಗಿ ವೈಷ್ಣವತಂತ್ರವನ್ನು ರಚಿಸಿದ, ಕಲಿಯುಗದ ಅಂತ್ಯದಲ್ಲಿ ಧರ್ಮರಕ್ಷಣಕ್ಕಾಗಿ ಕಲ್ಕಿನಾಮಕನಾಗಿ ಅವತರಿಸಿದ, ಯಜ್ಞರೂಪಿಯಾಗಿ ಸಕಲಯಜ್ಞಭೋಕ್ಷವಾಗಿರುವ, ಆಯುರ್ವೇದಪ್ರವರ್ತಕನಾಗಿ ಧನ್ವಂತರಿ ನಾಮದಿಂದ ಪ್ರಸಿದ್ಧನಾದ, ದೇವತೆಗಳಿಗೆ ಅಮೃತಪಾನಮಾಡಿಸುವ ಉದ್ದಿಶ್ಯ ಮೋಹಿನೀ ರೂಪವನ್ನು ತಾಳಿದ, ಯೋಗಶಾಸ್ತ್ರಪ್ರವರ್ತಕನಾಗಿ ದತ್ತಾತ್ರೇಯರೂಪನಾದ, ಹಾಗೆ ಕುಮಾರ, ಹಂಸ, ಇತ್ಯಾದಿ ಶತ, ಸಹಸ್ರ, ಅನಂತರೂಪಿಯಾದ ಶ್ರೀಪರಮಾತ್ಮನ ಧ್ಯಾನಮಾಡಿದರು.

ತತ್ವಜ್ಞಾನದ ಉಪದೇಶವನ್ನು ಭಕ್ತರಿಗೆ ಕೊಡುವುದಕ್ಕೋಸ್ಕರ ಚಿಕ್ಕ ಬದರಿಯಲ್ಲಿರುವ ಶಿಷ್ಯವೃಂದವನ್ನು ಕುರಿತು ಹೋಗೆಂದು ಸಂಭಾಷಣಾನಂತರದಲ್ಲಿ ಶ್ರೀವೇದವ್ಯಾಸದೇವರಿಂದ ಆಜ್ಞಪ್ತರಾದ ಹಾಗೆ ಅಲ್ಲಿ ಇರುವ ಋಷಿವರರಿಂದ ಆವೃತವಾದ ಪೂರ್ಣಪ್ರಜ್ಞರು ವ್ಯಾಸನಾರಾಯಣರಿಗೆ ನಮಸ್ಕಾರಮಾಡಿ ತಮ್ಮ ಶಿಷ್ಯರನ್ನು ಹೊಂದಿ ಅಲ್ಲಲ್ಲಿ ಭಕ್ತಜನರಿಂದ ಕೊಡಲ್ಪಟ್ಟ ಭಿಕ್ಷಾನ್ನವನ್ನು ಸ್ವೀಕರಿಸಿ