Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಕರ್ನಾಟಕ ಸರ್ಕಾರ

ಸಂಖ್ಯೆ: DHS/ESM/39/18-19

ಆಯುಕ್ತಾಲಯ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು.
ಬೆಂಗಳೂರು-9 ದಿನಾಂಕ: 17/08/2019.

:-ಸುತ್ತೋಲೆ:-

ವಿಷಯಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಹಂತಗಳ ವಿಭಾಗೀಯ ಜಂಟಿ ನಿರ್ದೇಶಕರುಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಕುರಿತು.

*****

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊಸದಾಗಿ ಸೃಜನೆಗೊಂಡಿರುವ ವಿಭಾಗೀಯ ಜಂಟಿ ನಿರ್ದೇಶಕರುಗಳಿಗೆ ವಿವಿಧ ಹಂತಗಳಲ್ಲಿ ಅಧಿಕಾರವನ್ನು ಈ ಕೆಳಕಂಡಂತೆ ಪ್ರತ್ಯಾಯೋಜಿಸಿ ಆದೇಶಿಸಿದೆ.

  1. ಜಂಟಿ ನಿರ್ದೇಶಕರು. (ವೈದ್ಯಕೀಯ) ಇವರ ಹಂತದಲ್ಲಿ ನಿರ್ವಹಿಸುತ್ತಿದ್ದ ವೈದ್ಯಕೀಯ ವೆಚ್ಚ ಮರು ಪಾವತಿ ಬಿಲ್ಲುಗಳಿಗೆ ಸಂಬಂಧಿಸಿದಂತೆ ರೂ.ಎರಡುಲಕ್ಷ ದವರೆಗೆ ಒಳಪಟ್ಟ ವೈದ್ಯಕೀಯ ಬಿಲ್ಲುಗಳನ್ನು ವಿಭಾಗೀಯ ಜಂಟಿ ನಿರ್ದೇಶಕರುಗಳಲ್ಲಿಯೇ ನಿರ್ವಹಿಸಲು ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಹಾಗೂ ರೂ.ಎರಡುಲಕ್ಷಕ್ಕೂ ಮೇಲ್ಪಟ್ಟ ಬಿಲ್ಲುಗಳನ್ನು ನಿರ್ದೇಶನಾಲಯದ ಜಂಟಿ ನಿರ್ದೇಶಕರು, (ವೈದ್ಯಕೀಯ) ಇಲ್ಲಿಗೆ ಸಲ್ಲಿಸಲು ಸೂಚಿಸಿದೆ.
  2. ವರ್ಗಾವಣೆಯ ಸಂಧರ್ಭದಲ್ಲಿ, ತಮ್ಮ ವಿಭಾಗದ ಅಧಿಕಾರಿಗಳು/ನೌಕರರು ಮಾರಣಾಂತಿಕ ಖಾಯಿಲೆಯ ಆಧಾರದ ಮೇಲೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದಲ್ಲಿ, ಖಾಯಿಲೆಗೆ ಸಂಬಂಧಿಸಿದಂತೆ ಅಧಿಕಾರಿಗಳು/ನೌಕರರು ಸಲ್ಲಿಸುವ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಅಭಿಪ್ರಾಯ ನೀಡುವ ಅಧಿಕಾರವನ್ನು ವಿಭಾಗೀಯ ಜಂಟಿ ನಿರ್ದೇಶಕರುಗಳಿಗೆ ಪ್ರತ್ಯಾಯೋಜಿಸಲಾಗಿದೆ.

ಆಯುಕ್ತರು.
17.0.19

ಆರೋಗ್ಯ ಮತ್ತು ಕುಕ ಸೇವೆಗಳು,
ಬೆಂಗಳೂರು.

ಕೆ. ರಾಜೇಶ್

ಈ ಕೆಳಕಂಡ ಅಧಿಕಾರಿಗಳಿಗೆ ಮಾಹಿತಿಗಾಗಿ:-

  1. ಮಾನ್ಯ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು,ಬೆಂಗಳೂರು.
  2. ಮುಖ್ಯ ಆಡಳಿತಾಧಿಕಾರಿಗಳು ಆರೋಗ್ಯ ಆಪ್ತ ವಿಭಾಗಕ್ಕೆ
  3. ಮುಖ್ಯ ಲೆಕ್ಕಪತ್ರಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರು, ಆರೋಗ್ಯ/ಎನ್.ಹೆಚ್.ಎಂ. ವಿಭಾಗ
  4. ಎಲ್ಲಾ ಸಹ-ನಿರ್ದೇಶಕರುಗಳಿಗೆ/ಜಂಟಿ ನಿರ್ದೇಶಕರುಗಳಿಗೆ.

ಪ್ರತಿಯನ್ನು ಮಾಹಿತಿಗಾಗಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಿದೆ.

  1. ಎಲ್ಲಾ ವಿಭಾಗೀಯ ಜಂಟಿ ನಿರ್ದೇಶಕರುಗಳಿಗೆ.
  2. ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ.
  3. ವೈದ್ಯಕೀಯ ಅಧೀಕ್ಷಕರು. ಕೆ.ಸಿ.ಜನರಲ್ ಆಸ್ಪತ್ರೆ, ಬೆಂಗಳೂರು.
  4. ಎಲ್ಲಾ ಜಿಲ್ಲಾ ಶಸ್ತ್ರಚಿಕಿತ್ಸಕರುಗಳಿಗೆ.
  5. ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ.
  6. ಎಲ್ಲಾ ಆಡಳಿತ ವೈದ್ಯಾಧಿಕಾರಿಗಳಿಗೆ/ತಾಲ್ಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರ.
  7. ಗಣಕಯಂತ್ರ ವಿಭಾಗಕ್ಕೆ. (ಅಂತರ್ಜಾಲದಲ್ಲಿ ಪ್ರಕಟಿಸಲು ಕ್ರಮವಹಿಸುವುದು)
  8. ಕಛೇರಿ ಪ್ರತಿ.

Scanned by CamScanner