Benchmarks
View scores and output across OCR models spanning many document categories.
Want to run these evals on your own documents?
Talk to Sales2x4=8
❖ ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
25. ನನ್ನ ಗೋಪಾಲ ಪಾಠದಲ್ಲಿ ಪ್ರಕೃತಿಯನ್ನು ಹೇಗೆ ವರ್ಣಿಸಲಾಗಿದೆ.
ಅಥವಾ
ಗೋಪಾಲ ಮತ್ತು ಬನದ ಗೋಪಾಲನ ನಡುವೆ ನಡೆದ ಸಂಭಾಷಣೆ ಏನು?
26. ಗುರಿ ಪದ್ಯದ ಸಾರಾಂಶ ಬರೆಯಿರಿ.
ಅಥವಾ
ಅಡಿಗರ ಪ್ರಕಾರ ಜೀವನ ಯಾವಾಗ ಸಾರ್ಥಕವಾಗುತ್ತದೆ?
❖ ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
4x1=4
“ಸಾಧಕನಾದವನು ಕನಸುಗಳನ್ನು ಕಾಣಬೇಕು. ಆದರೆ ನಿದ್ರೆಯಲ್ಲಿ ಕಾಣುವ ಕನಸುಗಳಲ್ಲ. ನಿದ್ರೆಯನ್ನೇ ತರಿಸದ ಕನಸುಗಳನ್ನು ಕಾಣಬೇಕು”. ಎಂದು ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ದೊಡ್ಡದಾದ ಕನಸನ್ನು ಕಾಣುವುದು ಅಂತಹ ದೊಡ್ಡ ಸಂಗತಿಯಲ್ಲ. ಆ ಕನಸಿನ ಕುರಿತು ಸಣ್ಣ ಪ್ರಯತ್ನ ಮಾಡುವುದೇ ದೊಡ್ಡ ಸಂಗತಿ. ಮನುಷ್ಯ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಚಂದ್ರ, ಮಂಗಳನ ಮೇಲೆ ಅಡಿ ಇಟ್ಟಿರುವುದು ಯಾರೋ ಕಂಡ ಕನಸಿನ ಫಲದಿಂದ ಹಾಗೂ ಅವರ ಛಲದಿಂದ ಕನಸನ್ನು ನೆರವೇರಿಸಿಕೊಳ್ಳಲು ಆತ್ಮ ಧೈರ್ಯ ಇರಬೇಕು. ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ದೃಢ ಸಂಕಲ್ಪವಿರಬೇಕು. ಸಾಧನೆಯ ಹಾದಿಯಲ್ಲಿ ಸೋಲುಂಡರೆ ಕುಗ್ಗ ಬಾರದು. ಬದಲಿಗೆ ಧೈರ್ಯದಿಂದ ಎದುರಿಸುವ ದೃಢತೆ ಇರಬೇಕು. ಕಾಣುವ ಕನಸು ದೊಡ್ಡದಿದ್ದರೆ ಎದುರಾಗುವ ಸವಾಲುಗಳು ಚಿಕ್ಕದಾಗಿ ಕಾಣುತ್ತವೆ.
ಪ್ರಶ್ನೆಗಳು :
27. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಿಳಿಸಿರುವಂತೆ ಎಂತಹ ಕನಸನ್ನು ಕಾಣಬೇಕು?
28. ಯಾರೋ ಕಂಡ ಕನಸಿನಿಂದ ಮನುಷ್ಯ ಎಲ್ಲಿಗೆ ಅಡಿ ಇಟ್ಟಿದ್ದಾನೆ?
29. ಕನಸನ್ನು ನನಸು ಮಾಡಲು ಏನಿರಬೇಕು?
30. ಯಾವಾಗ ಸವಾಲುಗಳು ಚಿಕ್ಕದಾಗಿ ಕಾಣುತ್ತವೆ?
ಭಾಗ-ಬಿ
❖ ಈ ಕೆಳಗಿನ ಪ್ರತಿಯೊಂದು ಹೇಳಿಕೆಗೂ ತಲಾ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಅದರ ಕ್ರಮಾಕ್ಷರದೊಂದಿಗೆ ಬರೆಯಿರಿ.
12x1=12
31. ಗಿರಗಿರ ಪದವು ಈ ಅವ್ಯಯಕ್ಕೆ ಉದಾಹರಣೆ.
ಎ) ಭಾವಸೂಚಕ
ಬಿ) ಕ್ರಿಯಾರ್ಥಕ
ಸಿ) ಸಾಮಾನ್ಯ
ಡಿ) ಅನುಕರಣಾವ್ಯಯ
32. ಷಟ್ಪದಿಯಲ್ಲಿ ಇಷ್ಟು ಸಾಲುಗಳಿರುತ್ತವೆ.
ಎ) ಮೂರು
ಬಿ) ಆರು
ಸಿ) ನಾಲ್ಕು
ಡಿ) ಎರಡು
33. ‘ಕೊನರು’ ಪದದ ಅರ್ಥ
ಎ) ಒದರು
ಬಿ) ಬೆದರು
ಸಿ) ಚಿಗುರು
ಡಿ) ಕೊಸರು
SSLC Model Question Paper-3, II Lang. Kan.- 2019
.....2