Benchmarks
View scores and output across OCR models spanning many document categories.
Want to run these evals on your own documents?
Talk to Salesಸರ್ಕಾರದ ಆದೇಶ ಸಂಖ್ಯೆ:ಗ್ರಾಕುನೀ&ನೈಇ 125 ಗ್ರಾನೀಸ(4)2022 ಬೆಂಗಳೂರು, ದಿನಾಂಕ:22.02.2022.
|320
ಪೀಠಿಕೆಯಲ್ಲಿನ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ
625 ಜನವಸತಿಗಳು ಮತ್ತು ರಾಮನಗರ ತಾಲ್ಲೂಕಿನ 250 ಜನವಸತಿಗಳಿಗೆ DBOT ಆಧಾರದ ಮೇಲೆ
ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ರೂ.67000.00ಲಕ್ಷ (ಅರವತ್ತೇಳು ಸಾವಿರ
ಲಕ್ಷ ರೂಪಾಯಿಗಳು ಮಾತ್ರ) ಗಳ ಅಂದಾಜಿನಲ್ಲಿ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಬಾಬು
ಸೇರಿದಂತೆ ಕೇಂದ್ರ ಪುರಸ್ಕೃತ ಜಲ ಜೀವನ್ ಮಿಷನ್ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ
ಅನುಮೋದನೆ ನೀಡಲು ಸರ್ಕಾರವು ಹರ್ಷಿಸುತ್ತದೆ.
2. ಈ ಆದೇಶವು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಅ) ಈ ಅನುಮೋದಿತ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಗೆ ಬರುವ ಹಳ್ಳಿ / ಜನವಸತಿಗಳು
ಮತ್ಯಾವುದೇ ಯೋಜನೆಗಳಡಿ ಸೇರ್ಪಡೆಯಾಗಿರಬಾರದು.
ಆ) ಈ ಯೋಜನೆಯ DBOT ಟೆಂಡರ್‌ನ್ನು KTPP ಪಾರರ್ದಶಕ ನಿಯಮಗಳನ್ನು ಅನುಸರಿಸಿ ಅದರಂತೆ
ಕ್ರಮವಹಿಸತಕ್ಕದ್ದು.
ಇ) ಟೆಂಡರ್ ಅವಾರ್ಡ್ ಮಾಡುವ ಮೊದಲು ಅಗತ್ಯವಿರುವ ಅನುದಾನವನ್ನು ಲಭ್ಯತೆ ಮಾಡಿಕೊಂಡು
ಕ್ರಿಯಾ ಯೋಜನೆಯಲ್ಲಿ ಅಳವಡಿಸಿದ ನಂತರ ನಿಯಮಾನುಸಾರ ಮುಂದಿನ ಕ್ರಮವಹಿಸುವುದು.
ಈ) ಈ ಯೋಜನೆಯ ಅನುಷ್ಠಾನ ಮತ್ತು ಅನುದಾನ ವಿನಿಯೋಗದಲ್ಲಿ ಅನುಮೋದಿತ ಟೆಂಡರ್ ಮೊತ್ತ
ಮೀರಿ ಹೆಚ್ಚಳವಾಗದಂತೆ ಅನುಷ್ಠಾನ ಅಧಿಕಾರಿಗಳು ನಿಗಾವಹಿಸಿ ಪ್ರಚಲಿತ ನಿಯಮಗಳನುಸಾರ ಅಗತ್ಯವಿರುವ
ನಿಬಂಧನೆಗಳನ್ನು ಅಳವಡಿಸಿಕೊಂಡು ಸೂಕ್ತ ರೀತಿಯಲ್ಲಿ ಒಡಂಬಡಿಕೆ - ಕರಾರುಗಳನ್ನು
ಮಾಡಿಕೊಳ್ಳತಕ್ಕದ್ದು.
ಉ) ಯಶಸ್ವಿ ಗುತ್ತಿಗೆದಾರರು ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಿ
ಕಾರ್ಯಗತಗೊಳಿಸಬೇಕು. ತದನಂತರ 5 ವರ್ಷಗಳ ಕಾಲ ಸದರಿ ಯೋಜನೆಯ ಸಂಪೂರ್ಣ ನಿರ್ವಹಣೆ
ಹಾಗೂ ಕಾರ್ಯಾಚರಣೆ ಜವಾಬ್ದಾರಿಯನ್ನು (ವಿದ್ಯುತ್ ಶುಲ್ಕ ಹೊರತುಪಡಿಸಿ) ಸದರಿ ಸಂಸ್ಥೆ
ನಿರ್ವಹಿಸತಕ್ಕದ್ದು.
ಊ) ಯೋಜನಾ ವ್ಯಾಪ್ತಿಯ ಜನವಸತಿಗಳಿಗೆ 55 LPCD ನೀರನ್ನು ಒದಗಿಸುವುದು. ಯಾವುದೇ ಕಾರಣಕ್ಕೂ
ಅನುಮೋದಿತ ಯೋಜನಾ ಅಂದಾಜು ವೆಚ್ಚದಲ್ಲಿ ಹೆಚ್ಚಳವಾದಲ್ಲಿ ಗುತ್ತಿಗೆದಾರರೇ ಅಂತಹ ಹೆಚ್ಚಳ
ಭರಿಸತಕ್ಕದ್ದು.
ಋ) ಗುತ್ತಿಗೆದಾರರು ಸಿದ್ಧಪಡಿಸುವ ಡಿ.ಪಿ.ಆರ್‌ಗೆ ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು
ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರ ಹಂತದಲ್ಲಿರುವ DBOT ತಾಂತ್ರಿಕ ಸಮಿತಿ, ತಾಂತ್ರಿಕ
ಸಿಂಧುತ್ವವನ್ನು ಪರಿಶೀಲಿಸಿ ದೃಢೀಕರಿಸಬೇಕು. ಹೀಗೆ ದೃಢೀಕರಿಸುವಾಗ ವಾಸ್ತವಿಕವಾಗಿ ಅಗತ್ಯವಿರುವ
ಪ್ರಮಾಣದ ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ವಿನ್ಯಾಸಗಳು
ಮತ್ತು ಕಾಮಗಾರಿಗಳು ಪೂರಕವಾಗಿರುವುದನ್ನು ದೃಢಪಡಿಸಿಕೊಳ್ಳಬೇಕು.
ಎ) ಈ ಯೋಜನೆಯ ಕಾಮಗಾರಿಯನ್ನು 18 ತಿಂಗಳ ಕಾಲಮಿತಿಯೊಳಗೆ ಅನುಷ್ಠಾನಗೊಳಿಸತಕ್ಕದ್ದು.
ಯಾವುದೇ ವಿಳಂಬಕ್ಕೆ ಅವಕಾಶವೀಯ ಕೂಡದು ಯೋಜನೆಯ ಘಟಕದಲ್ಲಿನ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ
ಅವಕಾಶವಿರುವುದಿಲ್ಲ. ಬಲ್‌ವಾಟರ್ ಮೀಟರ್‌ಗಳನ್ನು ಎಲ್ಲಾ ಜನವಸತಿಗಳ OHT ಬಳಿ ಅಳವಡಿಸತಕ್ಕದ್ದು.
2