Benchmarks
View scores and output across OCR models spanning many document categories.
Want to run these evals on your own documents?
Talk to Sales
22. ಸರ್ಕಾರದ ಆದೇಶ ಸಂ: ಗ್ರಾಅಪ:48(118) :ಆರ್‌ಆರ್‌ಸಿ:16
ದಿನಾಂಕ: 5-11-2016
ಪ್ರಸ್ತಾವನೆ:
ಗದಗ ಜಿಲ್ಲೆಯ ಗದಗ, ರೋಣ ತಾಲ್ಲೂಕು ಹಾಗೂ ರೋಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮೇಲೆ ಓದಲಾದ ಆದೇಶಗಳಲ್ಲಿ. ಆಡಳಿತಾತ್ಮಕ ಅನುಮೋದನೆ ನೀಡಿ ಇಲಾಖೆಯಿಂದ ಆದೇಶ ಹೊರಡಿಸಲಾಗಿರುತ್ತದೆ.
ಸದರಿ ಆದೇಶಗಳಂತೆ ಗದಗ ಜಿಲ್ಲೆಯ ಗದಗ, ರೋಣ ತಾಲ್ಲೂಕು ಹಾಗೂ ರೋಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿಗಾಗಿ ಲೆಕ್ಕ ಶೀರ್ಷಿಕೆ-3054-80-196-1-01-300 (ಯೋಜನೇತರ)ರಡಿ ಪೂರ್ಣಗೊಂಡ ಕಾಮಗಾರಿಗಳ ಬಿಲ್ ಪಾವತಿಗಾಗಿ ಗದಗ ಜಿಲ್ಲಾ ಪಂಚಾಯಿತಿಗೆ ರೂ.880.00 ಲಕ್ಷಗಳನ್ನು ಬಿಡುಗಡೆ ಮಾಡಲು ಸರ್ಕಾರವು ತೀರ್ಮಾನಿಸಿರುತ್ತದೆ.
ಆದ್ದರಿಂದ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ:48/32:ಆರ್‌ಆರ್‌ಸಿ:2016, ಬೆಂಗಳೂರು, ದಿನಾಂಕ:18-1-2017
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸದರಿ ಆದೇಶದಂತೆ ಗದಗ ಜಿಲ್ಲೆಯ ಗದಗ, ರೋಣ ತಾಲ್ಲೂಕು ಹಾಗೂ ರೋಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ.880.00ಲಕ್ಷ (ರೂಪಾಯಿಗಳು ಎಂಟುನೂರ ಎಂಬತ್ತು ಲಕ್ಷಗಳು ಮಾತ್ರ)ಗಳನ್ನು ಲೆಕ್ಕ ಶೀರ್ಷಿಕೆ-3054-80-196-1-01-300 (ಯೋಜನೇತರ) (Scheme head -3054-00-101-0-28-200-ನಿರ್ವಹಣೆ-ಯೋಜನೇತರ) ರಡಿ ಕೆಳಕಂಡ ಷರತ್ತುಗಳಿಗೊಳಪಟ್ಟು ಗದಗ ಜಿಲ್ಲಾ ಪಂಚಾಯಿತಿಗೆ ಬಿಡುಗಡೆ ಮಾಡಲು ಸರ್ಕಾರವು ಹರ್ಷಿಸುತ್ತದೆ.
ಷರತ್ತುಗಳು:
- ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡಿದ ಅನುದಾನವನ್ನು ಸದರಿ ಆದೇಶದಂತೆ ಗದಗ ಜಿಲ್ಲೆಯ ಗದಗ, ರೋಣ ತಾಲ್ಲೂಕು ಹಾಗೂ ರೋಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪಂ.ರಾಜ್ ಇಂಜಿನಿಯರಿಂಗ್ ವಿಭಾಗ /ಕ್ರೆಡಿಲ್ ವಿಭಾಗದಿಂದ ಅನುಷ್ಠಾನಗೊಳಿಸಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಮಾತ್ರ ಉಪಯೋಗಿಸತಕ್ಕದ್ದು. ಈ ಅನುದಾನವನ್ನು ಮಾರ್ಗಪಲ್ಲಟ ಮಾಡುವಂತಿಲ್ಲ ಹಾಗೂ ಯಾವುದೇ ಕಾರಣಕ್ಕೂ ವ್ಯಪಗತವಾಗದಂತೆ ನೋಡಿಕೊಳ್ಳತಕ್ಕದ್ದು.
- ಪೂರ್ಣಗೊಂಡ ಕಾಮಗಾರಿಗಳ ವಿವರಗಳನ್ನು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸಿರುವುದನ್ನು ಖಚಿತಪಡಿಸಿಕೊಂಡು ಕಾಮಗಾರಿಗಳ ಬಿಲ್ಲುಗಳನ್ನು ಪಾವತಿಸತಕ್ಕದ್ದು. ತಪ್ಪಿದಲ್ಲಿ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಜವಾಬ್ದಾರರಾಗುತ್ತಾರೆ.
- ಬಳಕೆಯಾದ ಹಣ ಮತ್ತು ಕಾಮಗಾರಿ ಪ್ರಗತಿಯನ್ನು ಮುಖ್ಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ರವರಿಗೆ ಒದಗಿಸತಕ್ಕದ್ದು.
- ಪ್ರಸ್ತುತ ಈ ಶೀರ್ಷಿಕೆಯಡಿ ಜಿಲ್ಲಾ ಪಂಚಾಯತಿ ಅನುಷ್ಠಾನಗೊಳಿಸಿರುವ ಹೆಚ್ಚುವರಿ ರಸ್ತೆ ಕಾಮಗಾರಿಯನ್ನು Worksoft works monitoring ಪದ್ಧತಿ ಮುಖಾಂತರ ಉಸ್ತುವಾರಿ ಮಾಡಬೇಕಾಗಿದ್ದು, ಈ ಸಂಬಂಧ ಪೂರ್ಣ ಮಾಹಿತಿಯನ್ನು Worksoft website ನಲ್ಲಿ ತಪ್ಪದೇ ಅಳವಡಿಸತಕ್ಕದ್ದು.