Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಕರ್ನಾಟಕ ಸರ್ಕಾರ
(ಸಾರಿಗೆ ಇಲಾಖೆ)

ಸಂಖ್ಯೆ: ಸಾಆ.ರಾಸಾಪ್ರಾ/ಸಭೆ-1/2021-22

ಸಾರಿಗೆ ಆಯುಕ್ತ ಕಛೇರಿ,
ಒಂದನೇ ಮಹಡಿ, ಎ-ಬ್ಲಾಕ್,
ಬಿ.ಎಂ.ಟಿ.ಸಿ- ಟಿ.ಟಿ.ಎಂ.ಸಿ, ಕಟ್ಟಡ,
ಶಾಂತಿನಗರ, ಬೆಂಗಳೂರು-27,
ದಿನಾಂಕ: 28-01-2022.

ಪ್ರ ಕ ಟ ಣೆ

ವಿಷಯ: ದಿನಾಂಕ: 16-02-2022 ರಂದು ರಾಜ್ಯ ಸಾರಿಗೆ ಪ್ರಾಧಿಕಾರದ
ಸಭೆಯನ್ನು ನಡೆಸುವ ಬಗ್ಗೆ.

********

ಮಾನ್ಯ ಕರ್ನಾಟಕ ರಾಜ್ಯ ಸಾರಿಗೆ ಅಪೀಲು ನ್ಯಾಯಾಧಿಕರಣ ಹಾಗೂ ಕರ್ನಾಟಕ ಉಚ್ಛ
ನ್ಯಾಯಾಲಯದಿಂದ ನೀಡಿರುವ ಆದೇಶದ ಅನುಸಾರ ಪ್ರಕರಣಗಳನ್ನು ಮತ್ತು ಹೊಸದಾಗಿ ಸ್ವೀಕರಿಸಲಾದ
ಅರ್ಜಿಗಳನ್ನು ವಿಲೇವಾರಿ ಮಾಡಲು ದಿನಾಂಕ: 16-02-2022 ರಂದು ರಾಜ್ಯ ಸಾರಿಗೆ ಪ್ರಾಧಿಕಾರದ
ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ.

ಆದ್ದರಿಂದ, ದಿನಾಂಕ: 16-02-2022 ರಂದು ಬೆಳಿಗ್ಗೆ 11-00 ಗಂಟೆಗೆ ಸಾರಿಗೆ ಆಯುಕ್ತರ ಕಚೇರಿ,
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಟಿ.ಟಿ.ಎಂ.ಸಿ ಬಿಲ್ಡಿಂಗ್, ಎ-ಬ್ಲಾಕ್, ಒಂದನೇ ಮಹಡಿ,
ಶಾಂತಿನಗರ, ಬೆಂಗಳೂರು-27 ಇಲ್ಲಿನ ಸಭಾಂಗಣದಲ್ಲಿ ನಡೆಯುವ ಸಭೆಗೆ ಆಸಕ್ತರು ಹಾಜರಾಗುವಂತೆ
ಕೋರಲಾಗಿದೆ. ಸಭೆಗೆ ಹಾಜರಾಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು
ಕಾಯ್ದುಕೊಳ್ಳುವುದು ನಿಯಮವಾಗಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದೆ.

// ರಾಜ್ಯ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರ ಆದೇಶದ ಮೇರೆಗೆ//

espacer

ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ,
ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು.

ಕಛೇರಿಯ ಸೂಚನಾ ಫಲಕಕ್ಕೆ

ಪ್ರತಿಯನ್ನು

ಅಪರ ಸಾರಿಗೆ ಆಯುಕ್ತರು, ಪರಿಸರ ಮತ್ತು ಇ-ಆಡಳಿತ, ಸಾರಿಗೆ ಆಯುಕ್ತರ ಕಛೇರಿ, ಬೆಂಗಳೂರು ಅವರಿಗೆ
ಮಾಹಿತಿಗಾಗಿ ಹಾಗೂ ಸದರಿ ವಿಷಯವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲು
ಕೋರಲಾಗಿದೆ.