Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

International Journal of Kannada Research

https://www.kannadajournal.com

ಕರ್ಮವನ್ನು ಮಾಡುತ್ತ (ಕೃಷಿ, ಪಶುಪಾಲನೆ, ವ್ಯಾಪಾರ, ಕುಶಲಕರ್ಮ, ಯುದ್ಧ) ವಿವಿಧ ಜೀವಿಗಳು ಸುಖಮಯ ಜೀವನವನ್ನು ನಡೆಸುತ್ತವೆ.

यस्यामन्न॑ व्रीहिय॒वौ यस्या॑ इ॒माः पंच॑ कृष्टय॑ ।

भूम्यै प॒र्जन्य॑पत्त्यै नमर्मोऽस्तु व॒र्षमॆदसे ॥

ಯಾವ ಭೂಮಿಯಲ್ಲಿ ಅನ್ನ, ಭತ್ತ, ಜವೆ ಗೋಧಿ ಮೊದಲಾದ ಅಹಾರಧಾನ್ಯಗಳನ್ನು ಬೆಳೆಯುತ್ತಾರೋ, ಯಾವ ಈ ಭೂಮಿಯಲ್ಲಿ ಪಂಚ ವಿಧದ ಕೃಷಿಯನ್ನು ಮಾಡುತ್ತಾರೋ, ಮೇಘದ ಪತ್ನಿಯಂತೆ ಕಂಗೊಳಿಸುತ್ತ ಸದಾಕಾಲ ಮಳೆಯನ್ನು ಸುರಿಸುವಂತೆ ಮಾಡುವ ಭೂಮಿ ತಾಯಿಗೆ ನನ್ನ ನಮಸ್ಕಾರ. (ಪಂಚ ಕೃಷಿಗಳು ಕೃಷಿ, ಪಶುಪಾಲನೆ, :- ವ್ಯಾಪಾರ ಕುಶಲಕರ್ಮ, ಯುದ್ಧ).

ಹೀಗೆ ಅದಮ್ಯವಾದ ಸ್ವರೂಪವನ್ನು ವಿಸ್ತಾರಗೊಳಿಸಿದ ಪೃಥ್ವಿಯು ವಿಶಾಲವಾಗಿ ಹರಡಿಕೊಂಡಾಗ ಪೂರ್ವ ಕಾಲದಲ್ಲಿ ದಿವ್ಯ ಜನರು ಈ ಹರಡಿಕೊಂಡಂಥ ಭೂಮಿಗೆ “ಪ್ರಥಮಾನಾ” “ಪೃಥಿವಿ” ಎಂದು ಕರೆದರು. ಹೀಗೆ ಭೂಮಿಯು ವಿಶಾಲವಾಗಿ ಹರಡಿಕೊಂಡ ನಂತರವೇ ಇಲ್ಲಿ ಅತ್ಯಂತ ಸುಂದರತಮವಾದ ಜೀವಿಗಳು, ಪ್ರಾಣಿಗಳು, ಪಶು ಪಕ್ಷಿಗಳು ಹುಟ್ಟಿ ಆಶ್ರಯ ಪಡೆದವು. ಆಗಲೇ ನಾಲ್ಕೂ ದಿಕ್ಕುಗಳು ಉತ್ಕೃಷ್ಟತರವಾಗಿ ವ್ಯಾಪ್ತವಾದವು.

श॑ति॒वा सु॑रभः स्यो॒ना वी॒लाली पय॑स्वती ।

भूमिरधि ब्रवीतु मे पृथ्वी पय॑सा स॒ह ॥

ಶಾಂತಿವಂತೆಯಾದ, ಸುಗಂಧಭರಿತವಾಗಿದ್ದು ಮಂಗಳಕರಳಾದ ತನ್ನಲ್ಲಿ ಅಮೃತ ಸದೃಶವಾದ ಆಹಾರ ಪದಾರ್ಥಗಳನ್ನು ಹೊಂದಿ ಹಾಲಿನಂತಹ ಜಲವನ್ನು ನೀಡುವ ಭೂಮಾತೆಯು ನಮ್ಮನ್ನು ರಕ್ಷಿಸಿ ಅನುಗ್ರಹಿಸಲಿ.

ಈ ರೀತಿ ಪೃಥ್ವಿಯಿಂದಾಗಿ ನಾಲ್ಕೂ ದಿಶೆಗಳು ಉತ್ಕೃಷ್ಟತರವಾಗಿ ವ್ಯಾಪ್ತವಾಗಿರುವಂತೆ ಶಾಂತಿ ಕಾರಕವಾಗಿ ಕಲ್ಯಾಣಮಯವಾದ, ಸುಗಂಧಿತವಾದ, ಸಮೃದ್ಧವಾದ, ಜಲಸಂಭ್ರತವಾದ ಪೃಥಿವಿಯು ಜಗತ್ತಿನ ಸಕಲ ಚರಾಚರ ಜೀವಿಗಳ ಕಲ್ಯಾಣಕರಳಾಗಿದ್ದಾಳೆ. ಅವ್ಯಕ್ತವಾದ ಪ್ರಕೃತಿಯ ಒಡಲಲ್ಲಿ ಭೂಮಿಯನ್ನೂ ಸೃಜಿಸಿದ, ಅನಿರ್ವಚನೀಯನಾದ, ಅವಿಕಾರಕನಾದ ಭಗವಂತನು ಈ

ಭೂಮಿಯಲ್ಲಿಯೇ ಅನ್ನಾದಿ ಪದಾರ್ಥಗಳನ್ನು ಸಂಯುಕ್ತಗೊಳಿಸಿ, ಭೋಗಿಸಲು ಯೋಗ್ಯವಾದ ನೆಲೆಯನ್ನು ಕಲ್ಪಿಸಿಕೊಟ್ಟು ಭೂತಾಯಿಯ ಮಕ್ಕಳಾದ ನಮಗೆ ನೆಲೆಯನ್ನು ಕಲ್ಪಿಸಿಕೊಟ್ಟಿದ್ದಾನೆ.

याम॒न्वैच्छंद्धविवा॑ वि॒श्वक॑मा॒तर॑ण॒ವೇ रज॑ಸಿ॒ ಪ್ರವಿಷ್ಟಾಮ್ ।

भुजिष्यं पात्रं निर्हितं गुहा याविर्भोग॑ अभवन्मातृमद्भयः ॥

ವಿಶ್ವವನ್ನೇ ಸೃಷ್ಟಿಸಿದ ಪರಮಾತ್ಮನು, ಸಾಗರದ ಒಳಗೆ ಬೆಳ್ಳಿಯಂತೆ ಅಡಗಿ ಯಾವುದೋ ಹವಿಸ್ಸಿನಿಂದ ಅನ್ನಾದಿ ಆಹಾರಾದಿಗಳಿಂದ ಕೂಡಿಕೊಂಡು ಗುಹೆಯಲ್ಲಿದ್ದು ಭೋಗಿಸಲು ಯೋಗ್ಯವಾದ ವಸ್ತುಗಳನ್ನು ನೀಡುತ್ತಿರುವ ಈ ಭೂಮಾತೆಯನ್ನು ಸೃಷ್ಟಿಸಿ ನಮ್ಮ ಭೋಗ್ಯ ಜೀವನಕ್ಕೆ ಆಶ್ರಯವನ್ನು ಕಲ್ಪಿಸಿಕೊಟ್ಟನು. ಇಂತಹ ಭೂಮಿಯು ಜೀವ ಬೀಜಗಳು ಹುಟ್ಟುವ ಮಹಾ ಕ್ಷೇತ್ರವಾಗಿದೆ. (ಭೂಮಿरावपनಂ महत्)

ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

उ॒भेनभ॑सी उ॒भय॑श्च लो॒कान् ये यज्व॑नाम॒भिर्जिताः स्वर्गाः॥

ದೌ ಮತ್ತು ಪೃಥ್ವಿ ಎಂದು ಕರೆಸಿಕೊಡಲ್ಪಡುವ ಭೂಮಿ ಮತ್ತು ಅಂತರಿಕ್ಷಗಳೆರಡೂ ಲೋಕಗಳು ಯಜ್ಞವನ್ನು ಮಾಡಿ ಗೆಲ್ಲಲ್ಪಟ್ಟ ಸ್ವರ್ಗ ಲೋಕಗಳೆನಿಸಿವೆ.

ಪೃಥಿವೀ ಲೋಕ ಹಾಗೂ ದ್ಯುಲೋಕಗಳೆರಡೂ ಇಹ ಹಾಗೂ ಪರ ಲೋಕಗಳು ಯಜ್ಞ ಮಾಡಿ ಸಂಪಾದಿಸಬೇಕಾದ ಸುಖಮಯ ಸ್ಥಿತಿಗಳಾಗಿವೆ. ಎಂದು ಈ ಮೇಲಿನ ಮಂತ್ರವು ಸಾರುತ್ತಿದೆ. ಯಾವ ರೀತಿ ತಾಯಿಯಾದವಳು ಮಗುವನ್ನು ಪ್ರೀತಿಯಿಂದ ಪೋಷಿಸಿ, ಪಾಲಿಸಿ ಬೆಳೆಸಿದರೂ ಆದೇ ಮಗು ದೊಡ್ಡದಾದ ನಂತರ ತಾಯಿಯನ್ನು ದ್ವೇಷಿಸಿದರೂ ತಾಯಿಯಾದವಳು ತನ್ನ ತಾಯ್ತನವನ್ನು ಹೇಗೆ ಕಳೆದುಕೊಳ್ಳುವುದಿಲ್ಲವೋ ಹಾಗೆ ಗಂಧತ್ವವನ್ನು ಹೊಂದಿ ಪೃಥ್ವಿ ತತ್ವವನ್ನು ಅಂತರ್ಗತ ಮಾಡಿಕೊಂಡಿರುವ ಪೃಥಿವಿಯು ಹೊರ ರೂಪದಲ್ಲಿ ಪರಿವರ್ತನೆ ಕಾಣುತ್ತಿದ್ದರೂ ಮೂಲತ: ಸಮಸ್ತ ಭೂಮಿಯು ಒಂದೇ ಗುಣವುಳ್ಳದ್ದಾಗಿದೆ. ನವೂ ಕೃಷಿಗಾಗಿ ಅಥವಾ ನಿಧಿಗಾಗಿ, ಖನಿಜಗಳಿಗಾಗಿ ಭೂಮಿಯನ್ನು ಅಗೆದು ಬಗೆಯುತ್ತೇವೆ. ಹಾಗಾದರೂ ಸಹ ತಾಯಿಯು ತಾಯ್ತನವನ್ನು ಕಳೆದು

~ 81 ~