Benchmarks
View scores and output across OCR models spanning many document categories.
Want to run these evals on your own documents?
Talk to Sales: 2 :
|
► ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ನಗದು ವ್ಯವಹಾರವನ್ನು ಕಡಿಮೆಗೊಳಿಸುವ ಹಾಗೂ, ಚಿಲ್ಲರೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯಾಣ ದರ ರೂ.5/-ರ ಗುಣಕದಲ್ಲಿ ನಿಗದಿಪಡಿಸಿ ಪುನರ್‌ರಚಿತ ಪ್ರಯಾಣದರಗಳನ್ನು ಆಕರಿಸಲಾಗುತ್ತಿದೆ. ► ನಗದು ವ್ಯವಹಾರವನ್ನು ಕಡಿಮೆಗೊಳಿಸಲು ಮತ್ತು ಸುಲಭವಾಗಿ ಹಣ ಸಂದಾಯಗೊಳಿಸಲು ಡಿಜಿಟಲ್ ಟಿಕೇಟಿಂಗ್ (QR code based) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ► ಮಾಸಿಕ ಮತ್ತು ದಿನದ ಪಾಸುಗಳ ಜೊತೆಗೆ ವಾರದ ಪಾಸುಗಳನ್ನು ಪರಿಚಯಿಸಲಾಗಿರುತ್ತದೆ. ► ಮುಂದುವರೆದು, ನಗರದ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆಯ 12 ಕಾರಿಡಾರ್‌ಗಳಲ್ಲಿ ಬಸ್ ಆದ್ಯತಾ ಪಥವನ್ನು 2ನೇ ಹಂತದಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ► ಸಂಸ್ಥೆಯು ಸಾಂದರ್ಭಿಕ ಒಪ್ಪಂದ, ಖಾಯಂ ಗುತ್ತಿಗೆ ಹಾಗೂ ಡೆಡಿಕೇಟೆಡ್ ಸೇವೆಗಳನ್ನು ಒದಗಿಸುತ್ತಿದೆ. ► ಭಾರತ ಸರ್ಕಾರದ ಫೇಮ್ -2 ಅಡಿಯಲ್ಲಿ 300 ಹವಾನಿಯಂತ್ರಿತ ಬಸ್ಸುಗಳು, ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 90 ಮೆಟ್ರೋ ಫೀಡರ್ ಬಸ್ಸುಗಳು ಒಟ್ಟಾರೆ 390 ಬಸ್ಸುಗಳನ್ನು ಸಂಸ್ಥೆಯ ವಾಹನ ಬಲಕ್ಕೆ ಸೇರ್ಪಡೆಗೊಳಿಸಲು ಯೋಜಿಸಲಾಗಿದೆ. ► ಸಂಸ್ಥೆಯ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು, ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಾಂಕ್ರಾಮಿಕ ರೋಗ ಹರಡದಂತೆ ಹಾಗೂ ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಬಸ್ಸುಗಳಲ್ಲಿ ಶುಚಿತ್ವವನ್ನು ಕಾಪಾಡಲು, ಸೋಂಕು ನಿವಾರಣಾ ಔಷಧಿಗಳನ್ನು ಸಿಂಪಡಿಸಿ ಶುಚಿಗೊಳಿಸಲಾಗುತ್ತಿದೆ. ► ಚಾಲನಾ ಸಿಬ್ಬಂದಿಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಅವಶ್ಯವಿರುವ ಮುಖಗವಸು ಮತ್ತು ಸ್ಯಾನಿಟೈಸರ್‌ಗಳನ್ನು ಸರಬರಾಜುಗೊಳಿಸಲಾಗಿದ್ದು, ಕರ್ತವ್ಯದ ಅವಧಿಯಲ್ಲಿ ಸಿಬ್ಬಂದಿಗಳು ಕಡ್ಡಾಯವಾಗಿ ಮುಖಗವಸನ್ನು ಧರಿಸುವಂತೆ ಹಾಗೂ ಸ್ಯಾನಿಟೈಸರ್‌ನ್ನು ಆಗಿಂದಾಗ್ಗೆ ಬಳಸಿ ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ತಿಳಿಸಲಾಗಿರುತ್ತದೆ. ► ಸಾರ್ವಜನಿಕ ಪ್ರಯಾಣಿಕರೊಂದಿಗೆ ಅಂತರ ಕಾಪಾಡಿಕೊಳ್ಳಲು, ಚಾಲಕರಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. |
||
|
2. |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ ರಿಯಾಯಿತಿ ಪಾಸುಗಳನ್ನು ನೀಡುವುದು, ಟಿಕೇಟ್ ಮಾಡಿಸುತ್ತಿರುವವರಿಗೆ ಬಸ್ ಟಿಕೇಟ್ ನಂಬರುಗಳಿಗೆ ಲಾಟರಿ ಎತ್ತಿ ಬಹುಮಾನಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರನ್ನು ಆಕರ್ಷಿಸಲಾಗುವುದೇ ; ಈ ಬಗ್ಗೆ ಸಂಸ್ಥೆಯ ನಿಲುವೇನು? |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಹಿರಿಯ ನಾಗರಿಕರಿಗೆ ಸಾಮಾನ್ಯ ಮತ್ತು ವಜ್ರ ಸೇವೆಗಳ ಟಿಕೇಟ್ ದರದಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ಹಾಗೂ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಕಲ್ಪಿಸಿರುತ್ತದೆ. |
...3